Showing posts with label ಏಕ ಬಾಣ ಬಿಟ್ಟನು ಜಾಣ karigiri. Show all posts
Showing posts with label ಏಕ ಬಾಣ ಬಿಟ್ಟನು ಜಾಣ karigiri. Show all posts

Monday, 12 April 2021

ಏಕ ಬಾಣ ಬಿಟ್ಟನು ಜಾಣ ankita karigiri

 ರಾಗ - : ತಾಳ -


ಏಕ ಬಾಣ ಬಿಟ್ಟನು ಜಾಣ ll ಪ ll


ಏಕ ಬಾಣ ತಾನೇಕ ಗುರಿಯಲಿ

ಏಕ ಸಂಕಲ್ಪದಿ ಏಕ ವಾಕ್ಯವನು ll ಅ ಪ ll


ಏಕ ದೈವ ಲೋಕೈಕ ಮಹಿಮ ಜಗ-

ದೇಕ ಕಾರಣ ಭಕ್ತ ಶೋಕ ನಿವಾರಣ

ಶ್ರೀಕರ ಶುಭಗುಣ ಸೀತಾರಮಣ ಪೂರ್ಣ

ರಾಕೇಂದು ವದನ ದಿವಾಕರ ಕುಲಭೂಷಣ ll 1 ll


ಕಾಕುಜನರ ಬಲು ಶೋಕ ಕಾರಣ ಕರು

ಣಾಕರ ಶರಣಾಗತ ಜನ ರಕ್ಷಣ

ಶ್ರೀಕಮಲೇಕ್ಷಣ ಲೋಕ ವಿಲಕ್ಷಣ

ಲೋಕವಿನುತ ಶ್ರೀ ಕರಿಗಿರಿ ನಿಕೇತನ ll 2 ll

***