ಬಾಲನ ಕಂಡೀರಾ ಬಲವಂತನ ಕಂಡೀರಾ ||ಅ.ಪ ||
ಅಂಜನೆಯುದರದಿ ಪುಟ್ಟಿತು ಕೂಸು
ರಾಮನ ಚರಣಕೆ ಎರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನೆ ಸುಟ್ಟಿತು ಕೂಸು ||1||
ಬಂಡಿ ಅನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||2||
ಮಾಯವಾದಿಗಳ ಗೆದ್ದಿತು ಕೂಸು
ದ್ವೈತಮತವನುದ್ಧರಿಸಿತು ಕೂಸು
ಮಧ್ವರಾಯರೆಂಬ ಪೆಸರಿನ ಕೂಸು
ಪುರಂದರವಿಠಲನ ಪ್ರೇಮದ ಕೂಸು
***
pallavi
kUsina kaNDIryA guru mukhyaprANa kaNDIryA
anupallavi
bAlana kaNDIryA balavantana kaNDIryA
caraNam 1
anjaneyudaradi huTTidu kUsu rAmana caraNange eragidu kUsu
sItage ungura koTTidu kUsu lankApuravene suTTidu kUsu
caraNam 2
bhaNDi annava nungidu kUsu bakana prANava kondidu kUsu
viSada laDDugeya medditu kUsu maDadige puSpava koTTidu kUsu
caraNam 3
mAyAvAdigaLa geddidu kUsu dvaita matavanudharisidu kUsu
madhva rAyaremba pesarina kUsu purandara viTTalana prEmada kUsu
***
ಕೂಸನು ಕಂಡೀರಾ ಮುಖ್ಯ ಪ್ರಾಣನ ಕಂಡೀರಾ
ಕೂಸನು ಕಂಡೀರಾ ಮುಖ್ಯ ಪ್ರಾಣನ ಕಂಡೀರಾ
ಅಂಜನೆಯುದರದಿ ಹುಟ್ಟಿತು ಕೂಸು
ರಾಮರ ಪಾದಕ್ಕೆರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನು ಸುಟ್ಟಿತು ಕೂಸು
ಬಂಡಿಯನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆಯ ಮೆದ್ದಿತು ಕೂಸು
ಮಡದಿಗೆ ಪುಷ್ಪವ ತಂದಿತು ಕೂಸು
ಮಾಯಾವಾದಿಗಳ ಗೆದ್ದಿತು ಕೂಸು
ಮಧ್ವಮತವನ್ನುದ್ಧರಿಸಿತು ಕೂಸು
ಮುದ್ದು ಶ್ರೀ ಪುರಂದರವಿಠಲನ ದಯದಿಂದ
ಉಡುಪಿಯಲ್ಲಿ ಬಂದು ನಿಂತಿತು ಕೂಸು
ಕೂಸನು ಕಂಡೀರಾ ಮುಖ್ಯ ಪ್ರಾಣನ ಕಂಡೀರಾ
*****