ಕರೆತಾರೆಲೆ ರಂಗನ ಶ್ರೀಹರಿಯ ನೀ
ಕರೆತಾರೆಲೆ ರಂಗನ ಪ
ಕರೆದು ತಾರೆಲೆ ಕಮಲನಾಭನ
ಕರೆದು ತಾರೆಲೆ ಕರುಣನಿಧಿಯನು
ಕರೆದು ತಾ ಕಾಲಲ್ಲಿ ಗಂಗೆಯ
ಸುರಿದ ಬಾಲ ಬ್ರಹ್ಮಚಾರಿಯ ಅ.ಪ
ಮಧು ಕೈಟಭಾಸುರರ ಸಂಹರಿಸಿದ,
ಮತ್ಸ್ಯಾವತಾರನನು
ಮುದದಿ ಮಂದರಗಿರಿಯನೆತ್ತಿದ
ಸುರರಿಗಮೃತವನಿತ್ತ ಕೂರ್ಮನ
ಧರೆಯನುದ್ಧರಿಸಿದ ವರಾಹನ
ತರುಣಿ ನೀನೀಗ ತಂದು ತೋರೆಲೆ 1
ಬಾಲನಿಗೊಲಿದವನ,
ಭಕ್ತ ನಿಧಿಯಾದ ನರಸಿಂಹನ
ಧರೆಯ ನೀರಡಿ ಅಳೆದ ವಾಮನ
ದೊರೆಯ ನಾನಿನ್ನೆಂದು ಕಾಂಬೆನೆ
ಭರದಿ ಭಾರ್ಗವನಾದ ರಾಮನ
ತರುಣಿ ತ್ವರಿತದಿ ತಂದು ತೋರೆಲೆ2
ದಶಶಿರ ನಳಿದವನ ಗೋಕುಲದಲ್ಲಿ,
ದಧಿಘೃತ ಮೆದ್ದವನ
ದುರುಳ ತ್ರಿಪುರರ ಗೆಲಿದ ಬೌದ್ಧನ
ಹರುಷದಲಿ ಹುಯವೇರಿ ಮೆರೆದನ
ಸುಜನ ರಕ್ಷಕನಾದ ಕೃಷ್ಣನ
ಸುದತಿ ನೀನೀಗ ತಂದು ತೋರೆಲೆ 3
***