Showing posts with label ಏನು ಮಾಡಲಿಯನ್ನ ಮನಸಿನಟ್ಟುಳಿ ಘನ ನೀನೆ ನಿಲಿಸೋ gurumahipati. Show all posts
Showing posts with label ಏನು ಮಾಡಲಿಯನ್ನ ಮನಸಿನಟ್ಟುಳಿ ಘನ ನೀನೆ ನಿಲಿಸೋ gurumahipati. Show all posts

Wednesday 1 September 2021

ಏನು ಮಾಡಲಿಯನ್ನ ಮನಸಿನಟ್ಟುಳಿ ಘನ ನೀನೆ ನಿಲಿಸೋ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ 


ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1 

ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2 

ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3 

ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4 

ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5 

ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6

***