ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ
ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1
ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2
ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3
ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4
ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5
ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6
***
No comments:
Post a Comment