..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ದುಂದುಭಿ ಸಂವತ್ಸರ ಸ್ತೋತ್ರ
ವಂದೇ ದುಂದುಭಿ ಸಂವತ್ಸರ ನಿಯಾಮಕಗೆ ಇಂದಿರಾಪತಿ ಪೂರ್ಣ ಆನಂದ ಚಿನ್ಮಯಗೆ ಚಂದಕರದಲಿ ವಂಶ ಇಷ್ಟಿ ಕರುಣಾದೃಷ್ಟಿ ನಂದನಂದನ ವಸುದೇವ ದೇವಕೀ ಸುತಗೆ ಪ.
ರಾಜಾ ಶುಕ್ರನು ಬುಧ ಮಂತ್ರಿ ಮೊದಲಾದವರೊಳು ರಾಜಸುತ ಏಕÀಸ್ಪರಾತ್ ಅಂತರ್ಯಾಮಿ ಈ ಜಗಜ್ಜನರ ಸಾಧು ಸಾಧನಕ್ಕಾಗಿ ನಿವ್ರ್ಯಾಜ ಕರುಣದಿ ಮಳೆ ಬೆಳೆ ಸೌಖ್ಯಗಳ ಈವ 1
ಅಲ್ಲಲ್ಲಿ ಅಗ್ನಿ ಭಯ ಚೋರ ದುಷ್ಟರ ಭಯ ಸುಳ್ಳುವಾದಿಗಳ ಚಟುವಟಿಕೆ ಆಗಾಗ ಕಳೆದು ಸಜ್ಜನರನ್ನು ಕಾಪಾಡಿ ಲೋಕ ಕ್ಷೇಮ ಮಾಲೋಲ ಮಾಳ್ಪನು ಪಾರ್ಥ ಸಖ ಪಾಂಡವೇಯ ಪಾಲ 2
ಪುತ್ರ ಸಂತಾನ ಬೇಕೆಂಬ ಸಾಧು ಭಕ್ತರಿಗೆ ವೈರಾಡಿ ವರದನು ವಿಪ್ರನಿಗೆ ಒಲಿದವನು ಚಂದ್ರ ಶೇಖರ ನುತನು ವನಜ ಭವ ತಾತನು ಶ್ರೀ ಪ್ರಸನ್ನ ಶ್ರೀನಿವಾಸನ ದಯದಿ ಈವ ಸಂತಾನ ಸಂಪತ್ತು 3
- ಶ್ರೀ ಕೃಷ್ಣಾರ್ಪಣಮಸ್ತು -
***