ಕೃಷ್ಣ ಕೃಷ್ಣ ಬೇಡಿಕೊಂಡೆ ಕೃಪೆಯ ಪಾಲಿಸೋ ಪ
ಎಷ್ಟು ಎಷ್ಟು ಕೇಳಿಕೊಂಡೆ ಎಳ್ಳಷ್ಟು ದಯಬಾರದೇ ಅ.ಪ
ಜನನ ಮರಣ ಹೊಳೆಯ ಸೇರಿ ಮುಳುಗಿ ಮುಳುಗಿ
ಬಳಲುತಿಹೆನು
ಧಣಿಯು ನೀನು ನೋಡುವಾರೆ ಮುಣಿದು ಬೇಡ್ವೆ
ಎತ್ತೋ ಕರುಣಿ 1
ನಿನ್ನ ಬಿಟ್ಟು ಇರುವೆನೆನೋ ನಿನ್ನದಯದಿ ನನ್ನ ಬದುಕು
ನಿನ್ನ ಮರೆತೆ ತಪ್ಪುಕ್ಷಮಿಸು ನಿನ್ನ ದಾಸ ಪ್ರಾಣರಾಣೆ2
ಈಗ ಆಗ ಎಂದು ಹೇಳಿ ಭೋಗದಲ್ಲೇ ರತಿಯ ನೀಡಿ
ನಾಗಶಯನ ನಾಮಸುಧೆಯ ಬೇಗ ಕೊಡದೆ ಬಿಡುವರೇನೋ3
ದೊಷಿನಾನು ಸತ್ಯದೇವ ದೋಷರೂರ ನಿನಗೆ ಶರಣು
ದಾಸನೆಂದು ಭಕ್ತಿಯಿತ್ತು ನಾಶಮಾಡೋ ಕುಂದುಗಳ ನೀ4
ಲೋಕವೆಲ್ಲ ಪೊರೆದ ನಿನಗೆ ಸಾಕೆ ಎನ್ನ ಕಷ್ಟವೇನೋ
ನೂಕಬೇಡ ದೇವ ಎನ್ನ ನಾಕ ದೊರೆಯೆ ಪುಣ್ಯಶ್ಲೋಕ 5
ಬರಿಯ ಶುಂಠ ನಾನು ಹರಿಯೆ ಅರಿಯೆದಾರಿ ವಲಿಸೆನಿನ್ನ
ಶರಣ ಜನರ ಬಿಡನು ಎಂಬ ಬಿರುದೊಂದೆ ಧೈರ್ಯವೆನಗೆ 6
ಶಿರಿಯರಮಣ “ಕೃಷ್ಣವಿಠಲ” ಶರಣು e್ಞÁನ ಸುಖದ
ಚರಣವೆರಡು ತೋರಿಸೆನಗೆ ನಿರುತ ಹೃದಯ ಕಮಲದಲ್ಲಿ 7
***