Showing posts with label ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ vyasa vittala. Show all posts
Showing posts with label ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ vyasa vittala. Show all posts

Friday, 27 December 2019

ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ankita vyasa vittala

ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ಪ

ಆಚಾರಿಯೆನಲಿ ಬಹು ದು | ರಾಚಾರಿಯೆನಲಿ ಜನರೆಲ್ಲನೀಚನೆಂದೆನಲಿ ಅನದಿರಲಿ 1

ಜ್ಞಾನಿ ಎಂದೆನಲಿ ದುರ್ಮಾರ್ಗ | ನಾನೆನಲಿ ಜನರೆಲ್ಲ ಬಹು ಮಾನವಂತನೆನಲಿ ಅನದಿರಲಿ 2

ಪಾಪಿಯಾಗಿರಲಿ ಬಹು ಸಂ | ತಾಪಿಯಾಗಿರಲಿ ಜನರೆಲ್ಲಪಾಪಿಯೆಂದೆನಲಿ ಅನದಿರಲಿ 3

ರಾಗವೇ ಬರಲಿ ಬಹು ವೈ | ಭೋಗವೇ ಬರಲಿ ವಿಷಯ ನಿಯೋಗವೇ ಬರಲಿ ಬರದಿರಲಿ 4

ಒಲಿದರೆ ನೀ ವ್ಯಾಸವಿಠಲ ಜನ | ರೆಲ್ಲ ಮತ್ತ್ಹಳಿಯುತಿರಲಿ ಇರದಿರಲಿ ಏನಾದರಾಗಲಿ ಹರಿಯೆ 5
*********