..
ಕೋಲನಾಡುತ ಬಂದ ಬಾಲೆಯರು ಕೈಮುಗಿದುನಿಂದು ಮೇಲುಗಿರಿ ವಾಸ ಗೆಲಿಸೆಂದು ಕೋಲ ಪ.
ಖಳರ ಬೆನ್ನಿನ ಚರ್ಮ ಸುಲಿದು ಭೇರಿಗೆ ಹಾಕಿಅಲವ ಬೋಧರೆ ಜಗದ್ಗುರು ಕೋಲ ಅಲವ ಬೋಧರೆ ಜಗದ್ಗುರು ವೆನುತಲೆಛಲದಿಂದ ಭೇರಿ ಹೊಯ್ಸಿ ದರ ಕೋಲ1
ಹರಿಯೆ ಸರ್ವೋತ್ತಮ ಹರಿಯೆ ಪರದೈವಹರಿದಾಸರೆಂಬೊ ಬಿರುದಿನ ಕೋಲಹರಿದಾಸರೆಂಬೊ ಬಿರುದಿ£ ಹೆಗ್ಗಾಳೆ ಹೆಬ್ಬಾಗಿಲಲ್ಲೆ ಹೊಯಿಸುತ ಕೋಲ 2
ವಿಷ್ಣು ಸರ್ವೋತ್ತಮ ವಿಷ್ಣುಪರದೈವ ವಿಷ್ಣು ದಾಸರೆಂಬೊ ಬಿರುದಿನ ಕೋಲವಿಷ್ಣು ದಾಸರೆಂಬೊ ಬಿರುದಿನ ಢಕ್ಕಿಯಘಟ್ಯಾಗಿ ತಾವು ಹೊಯಿಸುತ ಕೋಲ 3
ಒಬ್ಬನೆ ವಿಷ್ಣು ಇನ್ನೊಬ್ಬನಿಲ್ಲವೆಂದು ಅಬ್ಬರದಿಂದನಾಗಸ್ವರ ಹೆಗ್ಗಾಳೆ ಕೋಲಅಬ್ಬರದಿಂದ ನಾಗಸ್ವರ ಹೆಗ್ಗಾಳೆಹೆಬ್ಬಾಗಿಲಲ್ಲೆ ಹೊಯಿಸುತ ಕೋಲ4
ಮತದೊಳು ಮಧ್ವಮತ ವ್ರತದೊಳು ಹರಿದಿನ ಕಥೆಯೊಳು ಭಾಗವತ ವೆನ್ನಿಕೋಲಕಥೆಯೊಳು ಭಾಗವತ ವೆನ್ನಿ ರಾಮೇಶನಅತಿಭಕ್ತರ ನಡುವೆ ಪಥವೆನ್ನಿ ಕೋಲ 5
****