Showing posts with label ಎಷ್ಟು ಸಂಪದವಮ್ಮ ದ್ವಾರಕೆ ramesha. Show all posts
Showing posts with label ಎಷ್ಟು ಸಂಪದವಮ್ಮ ದ್ವಾರಕೆ ramesha. Show all posts

Wednesday, 11 December 2019

ಎಷ್ಟು ಸಂಪದವಮ್ಮ ದ್ವಾರಕೆ ankita ramesha

by  ಗಲಗಲಿ ಅವ್ವನವರು
ಎಷ್ಟು ಸಂಪದವಮ್ಮ ದ್ವಾರಕೆ
ಎಂದು ಸಂತುಷ್ಟನಾದನು ಬೊಮ್ಮ
ಕೃಷ್ಣನ ಹಾಡುತ ಪಾಡುತ
ಜನರೆಲ್ಲ ಉತ್ಕೃಷ್ಟರಾಗಿಹರಮ್ಮ ||ಪ||

ಪ್ಯಾಟಿಯ ಎದುರಾಗಿ ಕೋಟೆ
ಬಾಗಿಲ ಕೋಟಿ ಸೂರ್ಯರ ಬೆಳಕಿಲೆ
ಕೋಟಿ ಸೂರ್ಯರ ಬೆಳಕಿಲೆ ಹೊಳೆವಂಥ
ಹಾಟಕಾಂಬರನ ಅರಮನೆ ||೧||

ರನ್ನದ ಬಾಗಿಲು ಚಿನ್ನದ ಚೌಕಟ್ಟು
ಹೊನ್ನ ಕಳಸಗಳು ಹೊಳೆವೋವೆ
ಹೊನ್ನ ಕಳಸಗಳು ಹೊಳೆವೋವೆ
ಇದು ನಮ್ಮ ಪನ್ನಗ ಶಯನನ ಅರಮನೆ ||೨||

ಯೋಗಿಜನ ವಂದ್ಯ ಭಾಗವತಜನಪ್ರಿಯ
ಸಾಗರಶಯನನ ಅರಮನೆ
ಸಾಗರಶಯನನ ಅರಮನೆಯ ಬಾಗಿಲೊಳು
ಹೋಗಿ ಬರುವವರು ಕಡೆಯಿಲ್ಲ ||೩||

ನಾಗಶಯನನ ಮನೆಬಾಗಿಲು ಮುಂದೆ
ಸೋಂಗ್ಹಾಕಿ ನಿಂತ ಕೆಲವರು
ಸೋಂಗ್ಹಾಕಿ ನಿಂತ ಕೆಲವರು ಸಭೆಯೊಳು
ಹೋಗಬೇಕೆಂಬೋ ಭರದಿಂದ ||೪||

ದಾಸರು ಬಗೆಬಗೆ ಸೊಸಿಲೆ ತಳವೂರಿ
ಶ್ರೀಶ ರಾಮೇಶನ ಅರಮನೆ ಮುಂದೆ
ಶ್ರೀಶ ರಾಮೇಶನ ಅರಮನೆ ಮುಂದಿನ್ನು
ಕೂಸೆತ್ತಿಕೊಂಡು ನಿಂತ ಕೆಲವರು ||೫|
*********