Showing posts with label ಕಮಲ ಸಂಭವ ನಾಸಿಕಾ ಸಂಭವ ಕಾಯೋ ನಮಿಸುವೆ ನಿನಗೆ ನಾನು vijaya vittala. Show all posts
Showing posts with label ಕಮಲ ಸಂಭವ ನಾಸಿಕಾ ಸಂಭವ ಕಾಯೋ ನಮಿಸುವೆ ನಿನಗೆ ನಾನು vijaya vittala. Show all posts

Wednesday, 1 September 2021

ಕಮಲ ಸಂಭವ ನಾಸಿಕಾ ಸಂಭವ ಕಾಯೋ ನಮಿಸುವೆ ನಿನಗೆ ನಾನು ankita vijaya vittala

 .. ..

ರಾಗ : ಮುಖಾರಿ  ತಾಳ : ತ್ರಿವಿಡಿ 


ಕಮಲ ಸಂಭವ ನಾಸಿಕಾ । 

ಸಂಭವ ಕಾಯೋ ।

ನಮಿಸುವೆ ನಿನಗೆ ನಾನು ।। ಪಲ್ಲವಿ ।।

ಅಂದು ಧರಿಣಿ ಜಲ ।

ವಂದಾಗಿ ಕರಗಿರೇ ।

ನಂದನ ಚಿಂತಿಸೆ ।

ಬಂದ ವರಾಹಮೂರ್ತಿ ।। ಚರಣ ।।

ಮಧುಪಾನಾವನ । ಸಾ ।

ದುದು ಅವನ ಚರ್ಮ ।

ಹೊದಿಸಿ ಹೆಪ್ಪುಗೊಟ್ಟು ।

ಮೇದಿನೆಂದಿನಿಸಿದೆ ।। ಚರಣ ।।

ಕನಕಲೋಚನ ಭೂಮಿಯನು 

ಕದ್ದು ವೈಯ್ಯಲು ।

ಅನಿಮಿಷರೊಲಿಸೆ ಅವನ 

ಕೊಂದುದ್ಧರಿಸಿದೆ  ।। ಚರಣ ।।

ಕರುಣಾಕಟಾಕ್ಷದಿ 

ಹೊರವಲ್ಲಿ ನಾನೆಲ್ಲಿ ।

ಸರಿಗಾಣೆ ನಿನಗೆ ಅಂತರ 

ಬಹಿರದೊಳು ।। ಚರಣ ।।

ರಜೋಭಿಮಾನಿಯ 

ವಡಿಯಾ ಸುಜನಪಾಲಾ ।

ಭುಜಗ ಗಿರಿಯ ವಾಸಾ 

ವಿಜಯವಿಠ್ಠಲಾಧೀಶಾ ।। ಚರಣ ।।

***