Showing posts with label ನೋಡಿ ಶ್ರೀ ಹರಿಪೂಜಿ ಮಾಡುದು ಬಿಡಿ ಮನಕೃತ ವಾಜಿ mahipati. Show all posts
Showing posts with label ನೋಡಿ ಶ್ರೀ ಹರಿಪೂಜಿ ಮಾಡುದು ಬಿಡಿ ಮನಕೃತ ವಾಜಿ mahipati. Show all posts

Wednesday, 1 September 2021

ನೋಡಿ ಶ್ರೀ ಹರಿಪೂಜಿ ಮಾಡುದು ಬಿಡಿ ಮನಕೃತ ವಾಜಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ನೋಡಿ ಶ್ರೀ ಹರಿಪೂಜಿ ಮಾಡುದು ಬಿಡಿ ಮನಕೃತ ವಾಜಿ ಪ 


ಮಂಗಳಕರಸುಖ ಕಂಗಳಗಿದಿರಿಡುತದನೇಕ ಮುಂಸಗುಡಿಯಲಿ ಮೂಡಿ ರಂಗದೋರುವ ಘನಕೌತುಕ 1 

ತಾಳ ಮೃದಂಗ ಘನ ಭೇರಿ ಫಳಗುಡುತದೆ ಪರೋಪರಿ ತಿಳಿದವನಧಿಕಾರಿ ಕೇಳಲ್ಹೋಗುದು ಭವಭಯ ಹಾರಿ 2 

ಹೇಳಲೆನ್ನಳವಲ್ಲ ಹೊಳೆವುತಿಹುದು ಮೂಜಗವೆಲ್ಲ ಕೇಳಿ ಸವಿಯ ಸೊಲ್ಲ ತಿಳಿದ ಮಹಿಮ ತಾನೆ ಬಲ್ಲ 3 

ಅಜಪ ಸುಜಪ ಮಂತ್ರ ರಾಜಿಸುತಿಹುದು ಬಾಹ್ಯಾಂತ್ರ ತ್ರಿಜಗ ಮಾಡುವ ಪವಿತ್ರ ಸುಜನ ನೋಡುವ ಸುಚರಿತ್ರ 4 

ಸ್ವಹಿತ ಸುಖದ ಸಾರ ಶ್ರೀಹರಿಪೂಜಿ ನಿರಂತರ ಮಹಿಪತಿ ಮನೋಹರ ಸಾಹ್ಯ ಸಕಲಕಿದೆ ಸಹಕಾರ 5

****