Showing posts with label ಕರುಣಿಸಿ ಕೇಳು ಕಂದನ ಮಾತನು purandara vittala KARUNISI KELU KANDANA MAATANU. Show all posts
Showing posts with label ಕರುಣಿಸಿ ಕೇಳು ಕಂದನ ಮಾತನು purandara vittala KARUNISI KELU KANDANA MAATANU. Show all posts

Wednesday 4 December 2019

ಕರುಣಿಸಿ ಕೇಳು ಕಂದನ ಮಾತನು purandara vittala KARUNISI KELU KANDANA MAATANU


ಪುರಂದರದಾಸರು
ರಾಗ ಆನಂದಭೈರವಿ ಅಟತಾಳ 

ಕರುಣಿಸಿ ಕೇಳೊ ಕಂದನ ಮಾತನು ||ಪ||

ಗರುಡವಾಹನನೆ ಗಂಗೆಯ ಪೆತ್ತ ಶ್ರೀ ಹರಿಯೆ ||ಅ||

ಇತ್ತ ಬಾರೆಂಬರಿಲ್ಲ , ಯಾರು ಕೇಳುವರಿಲ್ಲ
ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ
ತತ್ತರಗೊಳುತೇನೆ ತಾವರೆಲೆನೀರಂತೆ
ಚಿತ್ತ ಭ್ರಮಿಸಿ ಕಣ್ಣು ಕತ್ತಲಾಯಿತು ಹರಿಯೆ ||

ಇಂದುಂಬಶನವಿಲ್ಲ , ಇರವ ಕೇಳುವರಿಲ್ಲ
ಒಂದು ಸುತ್ತಿಗೆ ತುಂಡು ಅರಿವೆ ಇಲ್ಲ
ಬೆಂದೊಡಲಿಗೆ ಒಬ್ಬರಯ್ಯೊ ಎಂಬುವರಿಲ್ಲ
ಬಿಂದುಮಾತ್ರದಿ ಸುಖವ ನಾ ಕಾಣೆ ಹರಿಯೆ ||

ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿ
ಅಲ್ಲವ ತಿಂದಿಲಿಯಂತೆ ಬಲಲುವೆನೆ
ಫುಲ್ಲಲೋಚನ ಪೂರ್ಣದಯದಿ ಸಲಹೊ ಎನ್ನ
ಸಲ್ಲದ ನಾಣ್ಯವ ಮಾಡಿಬಿಡುವರೆ ಹರಿಯೆ ||

ನಖಕೇಶಪರಿಯಂತ ನಾನಾಭವದಿ ನೊಂದೆ
ಸುಖವ ಕಾಣೆನು ಬಿಂದುಮಾತ್ರದಲಿ
ಮುಖವರಿಯದ ರಾಜ್ಯದೊಳಗೆ ಎನ್ನನು ಬಿಟ್ಟು
ಬಕನಂತೆ ಮಾಳ್ಪುದುಚಿತವೆ ಶ್ರೀಹರಿಯೆ ||

ಇಷ್ಟು ದಿವಸ ನಿನ್ನ ನೆನೆಯದ ಕಾರಣ
ಕಷ್ಟಪಟ್ಟೆನು ಸ್ವಾಮಿ ಕಾಯೊ ಎನ್ನ
ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯ-
ವಿಟ್ಟು ಸಲಹೊ ಶ್ರೀಪುರಂದರವಿಠಲ ||
***

pallavi

karuNisi kELo kandana mAtanu

anupallavi

garuDa vAhanane gangeya petta shrI hariye

caraNam 1

itta bArembarilla yAru kELuvarilla hattira kuLLirisi Adariparilla
tattara koLutEne tAvarele nIrante citta bhramasi kaNNu kattalAyitu hariye

caraNam 2

indumbashanavilla irava kELuvarilla ondu suttige tuNDu ariveyilla
pondoDalige obbayyo embuvarilla bindu mAtradi sukhava nA kANe hariye

caraNam 3

elliddarenagondu neleyilla shrI hari allava tindiliyante baLaluvene
pullalOcana pUrNa dayadi salaho enna sallada nANyava mADi biDuvare hariye

caraNam 4

nakha kEsha pariyanta nAnA bhavadi nonde sukhava kANenu bindu mAtradali
mukhavariyada rAjyadoalage ennanu biTTu bakanante mALpudu citave shrI hariye

caraNam 5

iSTu divasa ninna neneyada kAraNa kaSTa paTTenu svAmi kAyo enna
muTTi bhajisilla muravairi nI dayaviTTu salaho purandara viTTala
***

ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇ ಪ

ಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1

ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2

ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3

ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4

ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
******