Showing posts with label ಸ್ಮರಿಸಿ ಸುಖಿಸಿರೋ ಶ್ರೀನಿವಾಸನ prasannavenkata. Show all posts
Showing posts with label ಸ್ಮರಿಸಿ ಸುಖಿಸಿರೋ ಶ್ರೀನಿವಾಸನ prasannavenkata. Show all posts

Saturday, 1 May 2021

ಸ್ಮರಿಸಿ ಸುಖಿಸಿರೋ ಶ್ರೀನಿವಾಸನ ankita prasannavenkata

 ರಾಗ : ಭೂಪಾಳಿ ತಾಳ : ತ್ರಿವಿಡಿ


ಸ್ಮರಿಸಿ ಸುಖಿಸಿರೋ ಶ್ರೀನಿವಾಸನ ।

ಸಿರಿ ಚರಣ ವಾರಿಜಗಳನುದಿನ ।

ದುರಿತ ಕೋಟಿಗಳನೋಡಿಸುವ ನಿಜ ।

ಶರಣ ವತ್ಸಲನ ಸ್ಮರಿಸಿ ಸುಖಿಸೀ ।। ಪಲ್ಲವಿ ।।


ಶಬ್ದ ಬ್ರಹ್ಮನ ಕಡ್ದನೊದ್ದನ ।

ಅಭ್ಡಿಮಥಿಸಮರೇಂದ್ರಗೊಲಿದನ ।

ಅಬ್ಜಭವ ವಾಸದಲಿ ತೋರ್ದು । ದೈ ।

ತ್ಯರ್ಭಕೋದ್ಧರನಾ ಹಬ್ಬಿಲಿಡಿಯ ।।

ನಂಬಿಯಳಳಿದನಾ ।

ಮೊಬ್ಬಿನೇಳಿಗೆ ಯನ್ನ ತರಿದನ ।

ಕುಬ್ಧಿಯಾಳ್ವನ ಸ್ವಸ್ಥ ಮೋಹನ ।

ಕಬ್ಬಿಯ ಕಲಿ ಹರನ ।। ಚರಣ ।।


ವಿಶ್ವ ರೂಪಾನಂತ ಋಷಭನ ।

ಅಶ್ವ ವದನನ ಯಜ್ಞ ಕಪಿಲನ ।

ವಿಶ್ವ ತೈಜಸ ಪ್ರಾಜ್ಞ । ತುರ್ಯಾ ।

ದಿ ಸ್ವರೂಪ ಧರನಾ ।।

ಅಶ್ವಿಯಾತ್ಮನ ಯಜ್ಞ ಶುಕ್ಲ ।

ಭೂತೇಶ್ವರನ ಮೋಹನನ ।

ರಾಜರಾಜೇಶ್ವರನ ಮಹಿದಾಸ ।

ಆಜಿತನ ಹರಿಯಗ ಅತ್ರೇಯನಾ ।। ಚರಣ ।।


ತಾಪಸಣಾ ಉರುಕ್ರಮನ ಭುವನ ।

ವ್ಯಾಪಕಧಾರಕಾ ಸ್ಥವಿಷ್ಠನ ।

ಶ್ರೀಪರಸ್ವೋದ್ಧಾಮ ಹರಿ । ಕೃಷ ।

ದ್ವೈಪಾಯನಪ ।।

ಶ್ರೀಪತ್ನಿಯ ಗರ್ಭನ ಕುಮಾರ । ಕ ।

ಳಾಪ್ರಪತ್ತಿ ಕಿಂಸ್ತುಘ್ನ । ಧನ್ವ೦ ।

ತ್ರಿ ಪ್ರಸನ್ನ ವೆಂಕಟ ಗಿರೀಶನ ।

ಶ್ರೀ ಪರಮಾತ್ಮನ ।। ಚರಣ ।।

****