Showing posts with label ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ gopalakrishna vittala. Show all posts
Showing posts with label ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ gopalakrishna vittala. Show all posts

Monday, 2 August 2021

ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ ankita gopalakrishna vittala

ಮುದ್ದು ಕೃಷ್ಣ ಮುನಿ ಶರಣ

ಉದ್ಧರಿಸು ನೀ ಉಡುಪಿ ರನ್ನ ಪ.

ಮುದ್ದೆ ಬೆಣ್ಣೆ ಕೊಡುವೆ ಚೆನ್ನ

ಮಧ್ವಮುನಿಯ ಮನ ಪ್ರಸನ್ನ ಅ.ಪ.

ಬಾಲೆಯರನು ಕೂಡಿ ವನದಿ

ಲೀಲೆಯಿಂದ ಕೊಳಲನೂದಿ

ಕಾಳಿಮಡುವ ಕಲಕಿ ನಿಂದ

ಲೀಲೆ ಕೇಳೆ ಮನಕಾನಂದ 1

ನಿನ್ನ ಮಹಿಮೆ ಅಧಿಕವಾಗಿ

ಎನ್ನ ಮನಕೆ ಹರುಷವಾಗಿ

ಪನ್ನಗೇಂದ್ರಶಯನ ಸ್ವಾಮಿ

ನಿನ್ನ ರೂಪ ತೋರೊ ಪ್ರೇಮಿ 2

ಪೊರೆ ಗೋಪಾಲಕೃಷ್ಣವಿಠ್ಠಲ

ನಿರುತ ನಿನ್ನ ಚರಣ ಕಮಲ

ಮೊರೆಯ ಹೊಕ್ಕೆ ಮರೆಯದೆನ್ನ

ಕರುಣೆಯಿಂದ ಕಾಯೊ ಘನ್ನ 3

****