.
ಪಿತೃ ಕಾರ್ಯದ ವೈಶಿಷ್ಟ್ಯ
ಪಿತೃ ಕಾರ್ಯವ ಮಾಡೆ ಭಕ್ತಿಯಿಂದಲಿ
ಅತಿ ಹರುಷಬಡುವರು ಪಿತೃ ದೇವತೆಗಳು||ಪಲ್ಲ||
ಇಷ್ಟಾರ್ಥ ಫಲಿಸುವುದು ಕಷ್ಟ ದೂರಾಗುವದು
ಶ್ರಧ್ಧೆಯಿಂದಲಿ ಶ್ರಾಧ್ಧ ತಿಥಿಗಳನ ಮಾಡೆ
ಸದ್ಬ್ರಾಹ್ಮಣರನೆ ಆದರದಿ ಕರೆಸಿ
ಮೃಷ್ಟಾನ್ನ ಉಣಿಸಿ ದಕ್ಷಿಣೆಗಳ ಕೊಟ್ಟು||೧||
ಅತಿ ಭಕ್ತಿಯಿಂದಲಿ ಅತಿ ಶ್ರಧ್ಧೆಯಿಂದಲಿ
ಪಿತೃಕಾರ್ಯಗಳನ್ನ ಹಿತದಿ ಮಾಡೆ
ಪುತ್ರನ ಪುಣ್ಯಕ್ಕೆ ಎಣಿಕಿಲ್ಲದಾಗುವದು
ಅತಿಶಯನನ ಒಲುಮೆ ಸದಾ ದೊರಕುವದು||೨||
ಷಣ್ಣವತಿ ನಾಮದಿ ಕರೆಸುವ ಜನಾರ್ಧನನು
ಸ್ವೀಕರಿಸುವನು ತ್ರಿನೇತ್ರ ವಸು ಆದಿತ್ಯರೊಳಗಿದ್ದು
ಪುಣ್ಯ ಗಳಿಸಿಕೊಡುವನು ಮಧ್ವೇಶಕೃಷ್ಣನು
ಧನ್ಯರನ ಮಾಡುವನು ಭುವಿಯಲ್ಲಿ ತಾನು||೩||
~~~ಮಧ್ವೇಶಕೃಷ್ಣ.
****