Showing posts with label ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ gadugina veeranarayana. Show all posts
Showing posts with label ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ gadugina veeranarayana. Show all posts

Wednesday, 1 September 2021

ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ankita gadugina veeranarayana

 ..

kruti by ವೀರನಾರಾಯಣ Veeranarayana 


ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ಪ


ಆನಂದಪ್ರದನೆಂದು ಭ್ರಮಿಸಿದೆಯಾ ಶ್ರೀಯೇ ಅ.ಪ.


ಮಕ್ಕಳನು ಹೆರುವ ಮನದಭಿಲಾಷೆಯಿಂದೇನೆಹೊಕ್ಕುಳಲಿ ಬ್ರಹ್ಮನನು ಪಡೆದು ಕುಳಿತನು ತಾನೆರಕ್ಕಸರ ಕಂಡೊಡನೆ ಹೆಣ್ಣಾಗಿ ನಿಲ್ಲುವನೆ ಅಕ್ಕ ಇಂಥವನೊಡನೆ ಸರಸವೆಂತಾಡುವೆಯಾ 1


ತಾನು ಸೇವೆಯಕೊಂಡು ಮಾನವನು ಪಡೆಯದೇದೀನನಂದದಿ ಭಕ್ತಜನ ಸೇವೆಗೆಳಿಸುವನೂಆನೆ ಕರೆದೊಡೆ ನಿನ್ನ ಬಿಟ್ಟೋಡಲಿಲ್ಲೇನೆಜ್ಞಾನಿಗಿಂತ ನೀನವಗೆ ಹೆಚ್ಚಿನವಳೇನೆ 2


ಮುದಿಋಷಿಯ ಕರೆತಂದು ಒದೆಸಿಕೊಂಡವನೆಹದನ ಬಂದೊಡನೆ ಬಹುರೂಪ ಧಾರಕನಮದುವೆಯಾದರು ತನ್ನ ಗುಟ್ಟನ್ನು ಕೊಡದವನಗದುಗಿನೊಡೆಯ ಶ್ರೀ ವೀರನಾರಾಯಣನ 3

***