Showing posts with label ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ankita shreeda vittala GOPI KEL NINNA MAGA JAARA IVA CHORA. Show all posts
Showing posts with label ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ankita shreeda vittala GOPI KEL NINNA MAGA JAARA IVA CHORA. Show all posts

Friday, 27 December 2019

ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ankita shreeda vittala GOPI KEL NINNA MAGA JAARA IVA CHORA










ಗೋಪಿ ಕೇಳ್ ನಿನ್ನ ಮಗ ಜಾರ 

ಇವ ಚೋರ ಸುಕುಮಾರ || ಪ ||


ಮುದದಿ ಮುಕುಂದ ಸದನಕಾ ಬಂದಾ

ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ ll 1 ll


ಮಾರನ ಪಿತ ತಾ ಮನೆಯೊಳು ಪೊಕ್ಕ

ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 2 ||


ಹರೆಯದ ಪೋರಿ ಜಗದ ಕಣ್ಗೋರಿ

ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 3 ||


ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ

ಗೋಪಾಲನ ಮನಸ್ಸೊಮ್ಮೆ ಹಾಂಗೆ ಒಮ್ಮೆ ಹೀಂಗೆ || 4 ||


ರಾಧೆಯ ಮನದ ಮೋದ ಮುಕುಂದ

ಶ್ರೀದವಿಠಲನಾಟ ಚೆಂದ ನಯನಾನಂದ ಆನಂದ || 5 ||

***



ಗೋಪಿ ಕೇಳ್ ನಿನ್ನ ಮಗ ಜಾರ 

ಇವ ಚೋರ ಸುಕುಮಾರ || ಪ ||

ಮುದದಿ ಮುಕುಂದ ಸದನಕಾ ಬಂದಾ

ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ

ಮಾರನ ಪಿತ ತಾ ಮನೆಯೊಳು ಪೊಕ್ಕ

ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 1 ||

ಹರೆಯದ ಪೋರಿ ಜಗದ ಕಣ್ಗೋರಿ(?)

ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 2 ||

ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ

ಗೋಪಾಲನ ಮನಸ್ಸೊಮ್ಮೆ ಹಾಂಗೆ ಒಮ್ಮೆ ಹೀಂಗೆ || 3 ||

ರಾಧೆಯ ಮನದ ಮೋದ ಮುಕುಂದ

ಶ್ರೀದವಿಠಲನಾಟ ಚೆಂದ ನಯನಾನಂದ ಆನಂದ || 4 ||
****

just scroll down for other devaranama