Showing posts with label ಬಾರಮ್ಮ ತುಳಸಿ ನೀನು ಶ್ರೀ ಹರಿ ಸತಿ gopalakrishna vittala BAARAMMA TULASI NEENU SRI HARI SATI. Show all posts
Showing posts with label ಬಾರಮ್ಮ ತುಳಸಿ ನೀನು ಶ್ರೀ ಹರಿ ಸತಿ gopalakrishna vittala BAARAMMA TULASI NEENU SRI HARI SATI. Show all posts

Thursday, 2 December 2021

ಬಾರಮ್ಮ ತುಳಸಿ ನೀನು ಶ್ರೀ ಹರಿ ಸತಿ ankita gopalakrishna vittala BAARAMMA TULASI NEENU SRI HARI SATI

ರಚನೆ: ಅಂಬಾಬಾಯಿ

ಬಾರಮ್ಮ ತುಳಸಿ ನೀನು ಶ್ರೀ ಹರಿ ಸತಿ ।।ಪ।।

ನಾರಿಮಣಿಯೇ  ನಿನ್ನ ಯಾರು ವರ್ಣಿಸುವರೇ
ಸಾರಸಾಕ್ಷಿಯೇ  ನಿನ್ನ ಸಾರಿ ಭಜಿಪೆ ಮುನ್ನ ।।೧।।

ರಂಗನ ಅಂಗನೆ ಮಂಗಳ ರೂಪಳೇ
ರಂಗು  ಮಾಣಿಕ್ಯದ್ವಜ್ರ  ಅಂಗಾಭರಣವಿಟ್ಟು ।।೨।।

ಶ್ರೇಷ್ಟರೂಪಳೇ  ಮನಮುಟ್ಟಿ ಪೂಜಿಪೆ ನಿನ್ನ
ಸೃಷ್ಟೀಶ  ಗೋಪಾಲಕೃಷ್ಣವಿಠ್ಠಲ ನರಸಿ ।।೩।।
***