Showing posts with label ಶೇಷರುದ್ರದೇವರು ಪಾದ ಭೂಪಾದ gopalakrishna vittala. Show all posts
Showing posts with label ಶೇಷರುದ್ರದೇವರು ಪಾದ ಭೂಪಾದ gopalakrishna vittala. Show all posts

Wednesday, 1 September 2021

ಶೇಷರುದ್ರದೇವರು ಪಾದ ಭೂಪಾದ ankita gopalakrishna vittala

by ambabai 

ಶೇಷ ರುದ್ರದೇವರು ಪಾದ ಭೂ-ಪಾದ ಪ. 


ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ ಹರಿಯ ಮಂದಿರಲ್ಲಿ ಇರುವ ಪಾದ ಹರ ಪುರಂದರರಿಗೆ ಪೂಜ್ಯವಾಗಿಹ ಪಾದ ಪಾದ 1 

ವಾರುಣಿ ದೇವಿಗೆ ವರನೆನಿಸಿದ ಪಾದ ಶ್ರೀ ರಾಮಗೆ ಕಿರಿಯನಾದ ಪಾದ ಘೋರ ಇಂದ್ರಾರಿಯ ಸಂಹರಿಸಿದ ಪಾದ ಪಾದ 2 

ವಾಯುದೇವರು ಜೊತೆಗೆ ವಾದವಾಡಿದ ಪಾದ ನೋಯದೆ ಭೂಮಿಯನು ಪೊತ್ತಿಹ ಪಾದ ಶ್ರೀಯರಸನ ಪಾದಪದ್ಮ ಸೇವಿಪ ಪಾದ ಸುರರು ಪಾದ 3 

ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ ಚಿತ್ತದಭಿಮಾನಿಗೆ ಸೇವಕನಾದ ಪಾದ ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ ಪಾದ 4 

ಘೋರರೂಪವ ತೊರೆದು ಸೌಮ್ಯವಾಗಿಹ ಪಾದ ಸೇರಿದವರನು ಪೊರೆವ ಶ್ರೇಷ್ಠ ಪಾದ ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ ಪಾದ 5

***