Showing posts with label ಮಾರ್ತಾಂಡಕುಲದೀಶ ದಶರಥನುದರದಿ govinda. Show all posts
Showing posts with label ಮಾರ್ತಾಂಡಕುಲದೀಶ ದಶರಥನುದರದಿ govinda. Show all posts

Friday, 15 November 2019

ಮಾರ್ತಾಂಡಕುಲದೀಶ ದಶರಥನುದರದಿ ankita govinda

by ಗೋವಿಂದದಾಸ
ಮಾರ್ತಾಂಡಕುಲದೀಶ ದಶರಥನುದರದಿಪುತ್ರನಾಗಿಯೆ ಜನಿಸಿ ರಾಘವ ವಿಶ್ವಾಮಿತ್ರರೆಜÕವಪಾಲಿಸಿ ತಾಟಕೀ ಮುಖ್ಯಧೂರ್ತದೈತ್ಯರ ಮಥಿಸಿಅಹಲ್ಯೆದೇವಿಯ ಪಾಲಿಸಿ ಅರ್ಥಿಯಲಿ ವಿಥಿಲೇಖೆಗೆಗಮಿಸುತ ಪೃಥ್ವಿಜಾತೆಯನೊಲಿಸಿ ಮಾರ್ಗದಿ ಕಾರ್ತವೀರ್ಯಾಂತಕನ ಭಂಗಿಸಿ ತ್ವರಿತದಿಂದಯೋಧ್ಯೆಗೈಸಿದ ರಾಮಸೀತೆಗೆ ಮುತ್ತಿನಾರತೀಯ ಬೆಳಗೀರೆ ಶೋಭಾನೆ 1

ಮಲತಾಯಿ ಕೈಕೆಯ ಮಾತಿಗೋಸುಗ ಪೋಗಿ ನೆಲಸಿದನಾರಣ್ಯದಿ ಪೋಗಿಮೃಗರಾಮ ತರಲುಪೋಗಲು ಭರದಿ ಸೀತೆಯ ರಾವಣೇಶನೊಯ್ಯಲುಮಾಯದೀ ರಾಮಲಕ್ಷ್ಮಣರ ವನದಿ ಚಲಿಸುತಲಿಕಪಿವರರ ಸ್ನೇಹದಿಜಲಧಿಬಂಧಿಸಿ ರಾವಣಾದ್ಯರಗೆಲಿದು ಶರಣಗೆ ಪಟ್ಟಗಟ್ಟುತ ಲಲನೆಸಹ ನಡೆತಂದಯೋಧ್ಯೆಗೆ ರಾಮಸೀತೆಗೆ ಹರಳಿನಾರತೀಯಾ ಬೆಳಗೀರೇ ಶೋಭಾನೆ 2

ಚಂದದಿ ಧರಣಿಯ ಪಾಲಿಸುತಿರೆ ರಾಮನೊಂದಪವಾದವಕೇಳಿಸೀತೆಯ ಘೋರಾರಣ್ಯದಿ ಬಿಡಲು ಪೇಳಿ ಗರ್ಭಿಣಿ ಸೀತೆಬಂದ್ವಾಲ್ಮೀಕಿಯರೊಳು ಬಾಳಿ ಪಡೆದು ಲವಕುಶರನಲ್ಲಿಚಂದದಲಿ ಪಾಲಿಸುತಿರೆ ಗೋವಿಂದನೆಜ್ಞಾಶ್ವವನು ಬಂಧಿಸಿಬಂದು ಕಲಹದಿ ನಿಜವನರಿತಾ ನಂದನರ ಕರೆತಂದಯೋಧ್ಯೆಗೆರಾಮಸೀತೆಗೆ ಕುಂದಣದಾರತೀಂiÀi್ಞ ಬೆಳಗೀರೆ ಶೋಭಾನೆ 3
*******