Showing posts with label ತಂದೆ ತಾಯಿಮಿತ್ರನೀನೆ ಬಾಂಧವ ನೀನೆ prasannavenkata. Show all posts
Showing posts with label ತಂದೆ ತಾಯಿಮಿತ್ರನೀನೆ ಬಾಂಧವ ನೀನೆ prasannavenkata. Show all posts

Monday, 11 November 2019

ತಂದೆ ತಾಯಿಮಿತ್ರನೀನೆ ಬಾಂಧವ ನೀನೆ ankita prasannavenkata

ಪ್ರಸನ್ನವೆಂಕಟದಾಸರು
ತಂದೆ ತಾಯಿಮಿತ್ರನೀನೆ ಬಾಂಧವ ನೀನೆ ನಿನ್ನಿಂದ ಬಳಗಿಲ್ಲೆನಗೆ ಇಂದಿರಾಧವನೆ ಕಾಯೊ ಪ.

ಹೊಲೆಯ ರಕ್ತದಿ ರೇತ ನಿಲಿಸಿದನೊರ್ವ ಪಿತನೆಲೆಸಿ ಗರ್ಭದೊಳು ರಕ್ಷಿಸಿದೆ ನೀನುಹಲವು ಯೋನಿಯ ತೋರಿ ತೊಳಲಿಸಿ ತುದಿಯಲ್ಲಿನೆಲೆಗೆ ನಿಲ್ಲಿಸುವಂಥ ಸುಲಭ ಜನಕನಲ್ಲೆ 1

ನವಮಾಸ ಧರಿಸಿ ಸ್ತನ್ಯವನುಣಲಿತ್ತಳವ್ವೆತವಕದಿ ನಡೆ ನುಡಿಸುವೆಯೊ ನೀನುಆವ ಕಾಲಕಾಲದಲ್ಲಿ ತವಗರ್ಭದಲ್ಲಿ ಪೊತ್ತುಜೀವಕೆ ಚೈತನ್ಯಾಶನವೀವ ತಾಯಿ ನೀನಲ್ಲವೆ 2

ಶ್ರೇಯಸನಾದರಿಸುವ ಪ್ರಿಯಸಖರೆಲ್ಲರು ನಿ:ಶ್ರೇಯಸದಿ ಸುಖಮುದದಾಯಕ ನೀನೆಮಾಯಪಾಶ ಬಂಧನದಿ ನೋಯುವರವರ್ಗಾಬಾಧೆಯನಟ್ಟಿ ಕಳೆವ ಚಿನ್ಮಯಮಿತ್ರನೀನಲ್ಲವೆ3

ವಿತ್ತವಿರೆ ಸಹೋದರರಿತ್ತ ಬನ್ನಿ ಕೂಡ್ಯೆಂಬರುವಿತ್ತಶೂನ್ಯನಾದರೆ ನೀನುಪೇಕ್ಷಿಸೆ ಅಯ್ಯಒತ್ತಿ ಬಹದುರಿತವಿಪತ್ತುಗಳ ಸವರಿ ಸುಮುಕ್ತಿಯ ಪದವೀವಾನಿಮಿತ್ತ ಬಂಧು ನೀನಲ್ಲವೆ 4

ಸಿರಿಯು ಪೋಗೆ ನಿಲ್ಲರು ಶರೀರ ಸಂಬಂಧಿಗಳಾತುರದ ದಾರಿದ್ರ್ಯ ಪಾಪಹರನು ನೀನೆಕರುಣಿ ಪ್ರಸನ್ನ ವೆಂಕಟರಮಣ ನಿನ್ನ ನಾಮಸ್ಮರಣೆ ಎನ್ನ ಜಿಹ್ವೆಗೆ ಮರೆಯದಿರಲಿ ಕಂಡ್ಯ 5
*******