..
ತೂಗಿರೆ ಶ್ರೀ ರಂಗವಲಿದ ದಾಸಾರ್ಯರ
ತೂಗಿರೆ ಜಗನ್ನಾಥರಾಯರ ಪ
ತೂಗಿರೆ ಭಾಗಣ್ಣ ಗುರುವರನುಗ್ರಹಪಾತ್ರ
ಭಾಗವತ್ತೋತ್ತಮರ ತೂಗಿರೆ ಅ.ಪ
ಘನ ಸುಜ್ಷಾನ ಸದ್ಭಕುತಿ | ಗುಣದಿ ಬಂಧಿತವಾದ
ಅನಿಲಮತವೆಂಬ ತೊಟ್ಟಲದಿ
ವನಜನಾಭನ ಧ್ಯಾನ ಯೋಗ ನಿದ್ರೆಯ ಮಾಳ್ಪ
ಕನಕ ಶಯ್ಯಾತ್ಮಜರ ತೊಗಿರೆ 1
ಯುದ್ಧದಿ ಸಾರಥಿ ಪದ್ಮಮಿತ್ರಜಗಾದ
ಮದ್ರದೇಶಾಧಿಪರ ತೂಗಿರೆ
ವೃದ್ಧಾಶ್ರವಾರ್ಯರ ಸದ್ಮನದಿ ಶಿಶುವಾಗಿ
ಉದ್ಭವಿಸುವರ ತೂಗಿರೆ 2
ಶಾಮಸುಂದರ ಸ್ವಾಮಿ ಧಾಮ ಪದಾರ್ಹರ
ಪ್ರೇಮವ ಪಡೆದವರ ತೂಗಿರೆ
ಶ್ರೀಮನ್ ಮಾನವಿಯಲ್ಲಿ ನೇಮದಿ ಭಜಿಪರ
ಕಾಮಿತ ಕೊಡುವವರ ತೂಗಿರೆ 3
***