Showing posts with label ಬಂದು ನೆಲೆಸಿಹ ನೊಡಿ ಶ್ರೀ ರಾಘವೇಂದ್ರನು lakumeesha. Show all posts
Showing posts with label ಬಂದು ನೆಲೆಸಿಹ ನೊಡಿ ಶ್ರೀ ರಾಘವೇಂದ್ರನು lakumeesha. Show all posts

Monday 6 September 2021

ಬಂದು ನೆಲೆಸಿಹ ನೊಡಿ ಶ್ರೀ ರಾಘವೇಂದ್ರನು ankita lakumeesha

 ankita ಲಕುಮೀಶ 

ರಾಗ: [ಅಭೋಗಿ] ತಾಳ: [ಆದಿ]


ಬಂದು ನೆಲೆಸಿಹ ನೊಡಿ ಶ್ರೀ ರಾಘವೇಂದ್ರನು 


ಅಂದು ಭೂಮಿಯ ಕದ್ದ ದೈತ್ಯನ 

ಕೊಂದ ವರಹಗೋವಿಂದದೇವನ 

ಛಂದದ ಕೋರೆಯಿಂದ ಜನಿಸಿದ 

ಸುಂದರ ತುಂಗಾನದಿಯ ತೀರದಿ  ಅ ಪ


ಪ್ರಥಮ ಯುಗದೊಳು ಈತ ಜಾತರೂಪ ಕಶ್ಯಪ

ಜಾತನೆನಿಸಿ ಮೆರೆದಾತ ಮತಿಗೆಟ್ಟ ಪಿತನ

ಅತುಳ ಭಾದೆಗಳ್ ಗೆದ್ದಾತ ಕೃತಿಪತಿಗೆ ಪ್ರೀತ

ವೀತಿಹೋತ್ರನ ಜನಕನ ಸತತ ನಲಿಯುತ ನ-

ಗುತ ಭಜಿಸುತ ರತುನಸ್ತಂಭದಿ ಪಿತಗೆ ನರಮೃಗ

ತತಿಯ ಪತಿಯನು ಜಿತದಿ ತೋರುತ  1

ಬ್ರಹ್ಮನಯ್ಯ ಸರ್ವೆಶಾ ಎಂದರುಹಿದಾ ಭಾವಿ 

ಬ್ರಹ್ಮದೇವನ ಆವೇಶದಿಂದ ಪುಟ್ಟಿ ಈ

ಬ್ರಹ್ಮಾಂಡದೊಳಗೆ ವ್ಯಾಸರಾಜ ಯತಿಯ ರವಿಭಾಸ

ಬ್ರಹ್ಮಣ್ಯತೀರ್ಥರ ಕುವರನೆನಿಸುತ 

ಬ್ರಹ್ಮಜಾಂಶಗೆ ಗುರುವು ಎನಿಸುತ ಬ್ರಹ್ಮತಾನೆಂಬ 

ಕುಮತಿಗಳ ಮನ ಹಮ್ಮು ಮುರಿಯುತ ದುಂದುಭಿ ಹೊಡೆಸುತ 2

ನಾಗಾದ್ರೀಶನ ದಯದಿ ತಿಮ್ಮಣ್ಣಭಟ್ಟರ

ಮಗುವೆನಿಸೀಜಗದೀ ವೇಂಕಟೇಶನಾಮದಿ

ನಿಗಮಾಗಮಗಳೋದಿ ವೀಣೆ ಗಾನ ವಿದ್ಯಾದಿ

ಮಿಗೆ ಪ್ರವೀಣನು ಎನಿಸೆ ಹರುಷದಿ ಸುಗುಣನಿಧಿ 

ಶ್ರೀಗುರುಸುಧೀಂದ್ರರು ರಾಘವೇಂದ್ರನೆಂದು ನಾಮ ನೀಡಲು

ನಗಧರ ಲಕುಮೀಶನೊಲಿಸುತ  3

***