ankita ಲಕುಮೀಶ
ರಾಗ: [ಅಭೋಗಿ] ತಾಳ: [ಆದಿ]
ಬಂದು ನೆಲೆಸಿಹ ನೊಡಿ ಶ್ರೀ ರಾಘವೇಂದ್ರನು ಪ
ಅಂದು ಭೂಮಿಯ ಕದ್ದ ದೈತ್ಯನ
ಕೊಂದ ವರಹಗೋವಿಂದದೇವನ
ಛಂದದ ಕೋರೆಯಿಂದ ಜನಿಸಿದ
ಸುಂದರ ತುಂಗಾನದಿಯ ತೀರದಿ ಅ ಪ
ಪ್ರಥಮ ಯುಗದೊಳು ಈತ ಜಾತರೂಪ ಕಶ್ಯಪ
ಜಾತನೆನಿಸಿ ಮೆರೆದಾತ ಮತಿಗೆಟ್ಟ ಪಿತನ
ಅತುಳ ಭಾದೆಗಳ್ ಗೆದ್ದಾತ ಕೃತಿಪತಿಗೆ ಪ್ರೀತ
ವೀತಿಹೋತ್ರನ ಜನಕನ ಸತತ ನಲಿಯುತ ನ-
ಗುತ ಭಜಿಸುತ ರತುನಸ್ತಂಭದಿ ಪಿತಗೆ ನರಮೃಗ
ತತಿಯ ಪತಿಯನು ಜಿತದಿ ತೋರುತ 1
ಬ್ರಹ್ಮನಯ್ಯ ಸರ್ವೆಶಾ ಎಂದರುಹಿದಾ ಭಾವಿ
ಬ್ರಹ್ಮದೇವನ ಆವೇಶದಿಂದ ಪುಟ್ಟಿ ಈ
ಬ್ರಹ್ಮಾಂಡದೊಳಗೆ ವ್ಯಾಸರಾಜ ಯತಿಯ ರವಿಭಾಸ
ಬ್ರಹ್ಮಣ್ಯತೀರ್ಥರ ಕುವರನೆನಿಸುತ
ಬ್ರಹ್ಮಜಾಂಶಗೆ ಗುರುವು ಎನಿಸುತ ಬ್ರಹ್ಮತಾನೆಂಬ
ಕುಮತಿಗಳ ಮನ ಹಮ್ಮು ಮುರಿಯುತ ದುಂದುಭಿ ಹೊಡೆಸುತ 2
ನಾಗಾದ್ರೀಶನ ದಯದಿ ತಿಮ್ಮಣ್ಣಭಟ್ಟರ
ಮಗುವೆನಿಸೀಜಗದೀ ವೇಂಕಟೇಶನಾಮದಿ
ನಿಗಮಾಗಮಗಳೋದಿ ವೀಣೆ ಗಾನ ವಿದ್ಯಾದಿ
ಮಿಗೆ ಪ್ರವೀಣನು ಎನಿಸೆ ಹರುಷದಿ ಸುಗುಣನಿಧಿ
ಶ್ರೀಗುರುಸುಧೀಂದ್ರರು ರಾಘವೇಂದ್ರನೆಂದು ನಾಮ ನೀಡಲು
ನಗಧರ ಲಕುಮೀಶನೊಲಿಸುತ 3
***
No comments:
Post a Comment