RAO COLLECTIONS SONGS refer remember refresh render DEVARANAMA
..
kruti by ಲಕ್ಷ್ಮೀನಾರಯಣರಾಯರು Lakshminarayanaru
ಯಾದವಕುಲ ದೀಪ ಶ್ರೀ
ಯಾದವ ಕುಲದೀಪ ಪ
ವಿಧಿಜನಕ ಮಾಧವ ಪಾಹಿ ಅ.ಪ
ಶರಣ ರಕ್ಷಕ ಬಿರುದನು ಕೇಳಿ
ಶರಣು ಹೊಕ್ಕೆನೋ ದೇವ 1
ಭುವನಪಾವನ ತವಪದ ಧ್ಯಾನ
ತವಕದಿ ಪಾಲಿಸೋ ದೇವ 2
ಲಕುಮೀಕಾಂತನೆ ಸಕಲಕೆ ನೀನೆ
ಮುಕುತಿದಾತನೆ ದೇವ 3
***