Showing posts with label ಗೋವಿಂದ ಗೋವಿಂದ ಕೃಷ್ಣ ಹರಿ ಗೋವಿಂದ ಮುಕುಂದ shree krishna GOVINDA GOVINDA KRISHNA HARI GOVINDA MUKUNDA. Show all posts
Showing posts with label ಗೋವಿಂದ ಗೋವಿಂದ ಕೃಷ್ಣ ಹರಿ ಗೋವಿಂದ ಮುಕುಂದ shree krishna GOVINDA GOVINDA KRISHNA HARI GOVINDA MUKUNDA. Show all posts

Sunday, 7 November 2021

ಗೋವಿಂದ ಗೋವಿಂದ ಕೃಷ್ಣ ಹರಿ ಗೋವಿಂದ ಮುಕುಂದ ankita shree krishna GOVINDA GOVINDA KRISHNA HARI GOVINDA MUKUNDA

ಗೋವಿಂದ ಗೋವಿಂದ ಕೃಷ್ಣ ಹರಿ ಪ

ಗೋವಿಂದ ಮುಕುಂದ ಗೋಪಾಲಕೃಷ್ಣ ಅ.ಪ

ಕಡೆಗಣ್ಣಿಲಿಂದೊಮ್ಮೆ ನೋಡೋ ನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋ ಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ 1

ಮಕ್ಕಳಿಗೊಡೆಯ ನೀನಾಗಿ ಹಸುಮಕ್ಕಳ ಕೂಡೆ ನೀನಾಡ ಹೋಗಿಸಿಕ್ಕದೆ ಬಹು ದಿನಕಾಗಿ ದಿಂಧಿ-ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ2

ಹೃದಯ ಕಮಲದೊಳಗೆನ್ನ ನಿನ್ನಪದಕಮಲವನೀ ದಯೆಗೈಯೊ ಮುನ್ನಚದುರಕುಣಿಯೊ ಚೆಲ್ವರನ್ನ ವಿ-ಬುಧರೊಡೆಯನೆ ನಿತ್ಯಾನಂದ ಕೃಷ್ಣ 3

***