Showing posts with label ಒಂದೇ ಕೂಗಳತೆ ಕೈಲಾಸಕ್ಕೆ govinda. Show all posts
Showing posts with label ಒಂದೇ ಕೂಗಳತೆ ಕೈಲಾಸಕ್ಕೆ govinda. Show all posts

Sunday, 10 November 2019

ಒಂದೇ ಕೂಗಳತೆ ಕೈಲಾಸಕ್ಕೆ ankita govinda

by ಗೋವಿಂದದಾಸ
ಒಂದೇ ಕೂಗಳತೆ | ಕೈಲಾಸಕ್ಕೆ |ಒಂದೇ ಕೂಗಳತೆ ಪ

ಬಾಲ ಮಾರ್ಕಾಂಡೇಯ ಕಾಲಪಾಶದಿ ಸಿಕ್ಕಿ |ಗೋಳಿಟ್ಟು ಸ್ತುತಿಸಲಾ ನೀಲಕಂಧರನಾ ||ಶೂಲಪಾಣಿಯು ಕಲ್ಲ ಲಿಂಗದಿ ಮೈದೋರಿ |ಕಾಲನ ಮುರಿದೆತ್ತಿ | ಬಾಲನ ಸಲಹಿz À 1

ಶಿವನ ಅರ್ಧ ಪ್ರಹರದಿ ಒಲಿಸಿಕೊಳ್ಳುವೆನೆಂದು |ಪವನಾತ್ಮಜನು ಗದೆಯನಂಬರಕ್ಕೆಸೆದು ||ಭುವನದಿ ಸ್ತುತಿಸುತ್ತ ಶಿರಒಡ್ಡಿನಿಂದಿರೆ |ತವಕದಿಂದೈತಂದು ಶಿವನು ಭೀಮನ ಕಾಯ್ದ 2

ಚರರನಟ್ಟಿದನೇ ರತ್ನಾಂಗದ ಶಿವನಿಗೆ |ಕರೆಯ ಪೋದನೇ | ಕನ್ಯನೆಂಬ ಚಂಡಾಲ ||ಬರದೋಲೆ ಕಳುಹಿಸಿ ಕೊಟ್ಟಾಳೆ ನರ್ಮದೆ |ಸ್ಮರಿಸಿದಾಕ್ಷಣ ಗೋವಿಂದನಸಖಬರುವರೇ 3
********