Showing posts with label ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ramesha. Show all posts
Showing posts with label ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ramesha. Show all posts

Wednesday, 4 August 2021

ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ankita ramesha

.. 

ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ಮೂರ್ತಿಗಳು ಗೆಲಿಸಲಿ ಪ.


ರಾಮೇಶ್ವರ ಕಂಚಿ ಪ್ರೇಮದಿ ಕುಂಭಕೋಣಸ್ವಾಮಿ ಶ್ರೀ ರಂಗ ತೋತಾದ್ರಿಸ್ವಾಮಿ ಶ್ರೀ ರಂಗ ತೋತಾದ್ರಿಬೇಲೂರು ಚೆನ್ನನ ಮೊದಲೆ ಬಲಗೊಂಬೆ 1

ಅಹೋಬಲ ಮೊದಲಾದ ಆ ವೆಂಕಟಾದ್ರಿ ಅಲ್ಲಿರೊ ಅನಂತ ಅಳಗಿರಿಅಲ್ಲಿರೊ ಅನಂತ ಅಳಗಿರಿ ದರ್ಭಶಯನದೇವರ ಮೊದಲೆ ಬಲಗೊಂಬೆ 2

ದೇವ ಜನಾರ್ಧನ ಕಾಯೊ ಸಾರಂಗಪಾಣಿಭಾವ ಭಕ್ತಿಲೆ ನಮಿಸೇವ ಭಾವ ಭಕ್ತಿಯಲೆ ನಮಿಸೇವ ಚಕ್ರಪಾಣಿ ಬೇಗ ಗೆಲಿಸೆಂದು 3

ಅಕ್ಕ ಶ್ರೀಮುಷ್ಣಿವಾಸ ಮುಖ್ಯಚಲುವರಾಯದೇವಕ್ಕಳಿಗೆ ವರವ ಕೊಡುವೋಳುದೇವಕ್ಕಳಿಗೆ ವರವ ಕೊಡುವೋಳು ಕನ್ಯಾಕುಮಾರಿ ಮುಖ್ಯಳ ಮೊದಲೆ ಬಲಗೊಂಬೆ4

ಛಾಯಾಭಗವತಿ ನಮ್ಮ ಕಾಯೆ ಕರುಣಾಂಬುಧೆಸಹಾಯವಾಗಮ್ಮ ಕಾಲಕಾಲಸಹಾಯವಾಗಮ್ಮ ಕಾಲಕಾಲಕೆಬ್ರಮ್ಹನ ತಾಯ ಗೆದ್ದು ಬರಬೇಕು 5

ಸುಬ್ರಹ್ಮಣ್ಯ ಸಾಸಿ ಒಬ್ಬ ಶ್ರೀ ಕೃಷ್ಣರಾಯ ನಿರ್ಭಯದಿ ಸ್ವಾದಿ ನಿಲಯನೆನಿರ್ಭಯದಿ ಸ್ವಾದಿ ನಿಲಯನೆ ತನುಮನಉಬ್ಬಿ ವಂದಿಸುವೆ ಕರುಣಿಸು6

ಹಂಪಿವಿರೂಪಾಕ್ಷದಿ ನಿಂತು ಪೂಜೆಯಗೊಂಬಯಂತ್ರೋದ್ದಾರಕಗೆ ಒಲಿದವನೆಯಂತ್ರೋದ್ದಾರಕಗೆ ಒಲಿದ ರಾಮೇಶನಕಾಂತೆಯರ ಗೆದ್ದು ಬರಬೇಕು 7

****