Showing posts with label ಹನುಮಂತ ಎಂಥ ವೈರಾಗ್ಯ ಹನುಮಂತ prasanna. Show all posts
Showing posts with label ಹನುಮಂತ ಎಂಥ ವೈರಾಗ್ಯ ಹನುಮಂತ prasanna. Show all posts

Friday, 27 December 2019

ಹನುಮಂತ ಎಂಥ ವೈರಾಗ್ಯ ಹನುಮಂತ ankita prasanna

yes

ಹನುಮಂತ ಎಂಥ ವೈರಾಗ್ಯ ಹನುಮಂತ
ಎಂಥ ಸೌಭಾಗ್ಯ ಗುಣವಂತ ||ಪ||

ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ
ಭಕುತಿಯ ಬೇಡಿದೆಯೊ ||ಅ.ಪ||

ಆವರಿಹರು ನಿನ್ಹೊರತು ರಾಘವರ
ಭಾವವರಿತು ಪ್ರತಿ ಕ್ಷಣಗಳಲಿ
ಸೇವೆ ಸಲಿಸಿ ದಯ ಪಡೆಯಲು ಭೋಗವ
ದಾವದನುಭವಿಸೆ ದುರ್ಲಭವು
ಜೀವೋತ್ತಮನದ ಬಯಸದೆ ಏಕೋ
ಭಾವದಿ ಪದಸೇವೆಯ ಕೇಳಿದ ವೀರ ||1||

ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ
ಷ್ಠಾನ ಪವನಸುತ ಜಗತ್ರಾಣ
ನೀನಲ್ಲದೆ ಖಗಮೃಗ ಸುರನರರುಗ
ಳೇನು ಚಲಿಸಬಲ್ಲರೊ ಹನುಮ
ಪ್ರಾಣಭಾವಿ ಚತುರಾನನ ಭುವಿಯೊಳ
ಗೇನು ರುಚಿಯೊ ಕಲ್ಯಾಣಚರಿತ ನಿನಗೆ ||2||

ಕಪಿ ರೂಪದಿ ದಶಕಂಧರನ ಮಹಾ
ಅಪರಾಧಕ್ಕೆ ಶಿಕ್ಷೆಯನಿತ್ತೆ
ನೃಪರೂಪದಿ ದುರ್ಯೋಧನನಸುವನು
ಅಪಹರಿಸಿದೆಯೋ ಬಲ ಭೀಮ
ವಿಪುಲ ಪ್ರಮತಿ ವರವೈಷ್ಣವ ತತ್ವಗ
ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ||3||
**********