Showing posts with label ನಂದಗೋಪನ ಕಂದ ನಾನು ವೃಂದಾರ ಕೇಂದ್ರ ಖಳಕುಲ hayavadana NANDAGOPANA KANDA NAANU VRUNDAARA KENDRA KHALAKULA. Show all posts
Showing posts with label ನಂದಗೋಪನ ಕಂದ ನಾನು ವೃಂದಾರ ಕೇಂದ್ರ ಖಳಕುಲ hayavadana NANDAGOPANA KANDA NAANU VRUNDAARA KENDRA KHALAKULA. Show all posts

Saturday, 11 December 2021

ನಂದಗೋಪನ ಕಂದ ನಾನು ವೃಂದಾರ ಕೇಂದ್ರ ಖಳಕುಲ ankita hayavadana NANDAGOPANA KANDA NAANU VRUNDAARA KENDRA KHALAKULA



ನಂದಗೋಪನ ಕಂದ ನಾನು

ವೃಂದಾರಕೇಂದ್ರ ಖಳಕುಲ ಮರ್ದನ ಪ.


ಎಂದೆಂದು ಎನ್ನ ನಂಬಿದ ಭಕುತರಿಗೆ ಸುತ್ತಿಂದಬಂದ ಕ್ಲೇಶಗಳನ್ನೆಲ್ಲ ಖಂಡಿಸಿತಂದೆ ಮಕ್ಕಳ ಪೊರೆವಂತೆ ಪಾಲಿಸುತಿಹೆಕಂದರ್ಪನಾಣೆ ಇದು ಎನಗೆ ಬಿರುದು 1


ಅಂದಂದು ಅವರು ಬೇಡಿದ ಇಷ್ಟಂಗಳನಿತ್ತೆಸಂದೇಹವಿಲ್ಲ ಸಂತತ ಸಲಹುವೆಮಂದಜನರೊಡನಾಡಿ ಮರುಳುಗೊಳದಿರು ಮನುಜ ಚೆಂದದಿಂದೆನ್ನ ಪೂಜೆಯನು ಮಾಡು 2


ಇಂದ್ರ ಗರ್ವಿಸಲವಗೆ ಸಾಂದ್ರ ಸುರತರುವ ಆನಂದನವನವನು ಪೊಕ್ಕು ಕಿತ್ತುತರಲುಒಂದಾಗಿ ರಣಕೆ ಬಂದು ನಿಂದಮರರನು ಕರುಣದಲಿಅಂದು ಪಾಲಿಸಿದೆ ಭಕ್ತರ ಬಂಧುವೆನಿಸಿ 3


ಇಂದುಮುಖಿ ಸಭೆಯಲ್ಲಿ ಕರೆಯಲಾಕ್ಷಣದೊಳಗೆಬಂದವಳ ಅಭಿಮಾನವನು ಕಾಯ್ದೆಇಂದುಧರ ಭಸ್ಮನುಪದ್ರದಲಿ ಬಳಲುತಿರೆಬಂದೊದಗಿ ಶಿವನÀ ಕಾಯಿದವನರಿಯಾ4


ಅಂಧಂತಮವ ದಾಟಿ ಅನಂತಾಸನಕೆ ಪೋಗಿಒಂದು ನಿಮಿಷದೊಳಗೆ ದ್ವಿಜನ ಸುತನ ತಂದೆಸಿಂಧುವಿನೊಳಗೆ ದೈತ್ಯನ ಕೊಂದು ಸಾಂದೀಪ -ನಂದನನÀ ಯಮನಪುರದಿಂದ ತಂದೆ 5


ಬಂಧಿಸಿ ಬಳಲಿಸುವ ನೃಪರ ಬಹುಬಲ ಜರಾ -ಸಂಧನ ಗಧೆಯ ಗಾಯದಿ ಕೊಲಿಸಿಅಂದವನ ದೆಸೆಯಿಂದ ನೊಂದ ನೃಪರನು ಬಿಡಿಸಿಕುಂದದುಡುಗೊರೆಯ ನಾ ಕೊಡಿಸಿ ಮೆರೆದೆ6


ಹಿಂದಾಗಜೇಂದ್ರನಿಗೊದಗಿದವನಾರು ಪಿತನಿಂದನೊಂದ ಪ್ರಹ್ಲಾದನ್ನ ಕಾಯ್ದವರದಾರುಮಂದರಗಿರಿಯನೆತ್ತಿ ಸುರರಿಗಮೃತ ಉಣಿ-ಸಿಂದಿರೆಯನಾಳ್ದ ಹಯವದನನರಿಯಾ7

***