Showing posts with label ಉಂಬುವ ಬನ್ನಿರೋ ನೀಟ ಅನುಭವದೂಟ mahipati. Show all posts
Showing posts with label ಉಂಬುವ ಬನ್ನಿರೋ ನೀಟ ಅನುಭವದೂಟ mahipati. Show all posts

Wednesday, 11 December 2019

ಉಂಬುವ ಬನ್ನಿರೋ ನೀಟ ಅನುಭವದೂಟ ankita mahipati

ಮಾಂಡ್ ರಾಗ ಕೇರವಾ ತಾಳ

ಉಂಬುವ ಬನ್ನಿರೋ ನೀಟ ಅನುಭವದೂಟ ||ಧ್ರುವ||

ಎಡಿಯು ಬಡಿಸಿ ಪೂರ್ಣ ಗೂಡಿನೊಳಿಟ್ಟಿದೆ ಖೂನ
ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ ||೧||

ತುತ್ತು ಕೊಂಬುದು ಬ್ಯಾಗ ಸತ್ಸಂಗದಲಿ ನೀವೀಗ
ಅತಿಶಯಾನಂದ ಭೋಗ ಉತ್ತಮ ಯೋಗ ||೨||

ಕಲ್ಪನೆಂಬುದು ನೊಣ ಬೀಳಗೊಡದೆ ಜತನ
ಬಳೆದುಕೊಂಡುಂಬುವ ಜಾಣ ಕಳೆದನು ಮಾನ ||೩||

ಸವಿಸವಿ ಮಾಡಿಕೊಂಡು ಸೇವಿಸುವದು ಮನಗಂಡು
ಪಾವನಾಗಬೇಕು ಉಂಡು ಸವಿಸೂರೆಗೊಂಡು ||೪||

ಉಂಡು ಮಹಿಪತಿ ನೋಡಿ ಕೊಂಡಾಡಿದಾನಂದಗೂಡಿ
ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ ||೫||
****

 ಕಾಖಂಡಕಿ ಶ್ರೀ ಮಹಿಪತಿರಾಯರು

ಉಂಬುವ ಬನ್ನಿರೋ ನೀಟ ಅನುಭವದೂಟ P

ಎಡಿಯು ಬಡಿಸಿಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ 1 
ತುತ್ತುಕೊಂಬುದು ಬ್ಯಾಗೆ ಸತ್ಸಂಗದಲಿ ನೀವೀಗ ಅತಿಶಯಾನಂದ ಭೋಗ ಉತ್ತಮ ಯೋಗ 2 
ಕಲ್ಪನೆಂಬುದು ನೊಣ ಬೀಳಗೊಡದೆ ಜತನ ಬಳೆದುಕೊಂಡುಂಬುವ ಜಾಣ ಕಳೆದನುಮಾನ 3 
ಸವಿಸವಿಮಾಡಿಕೊಂಡು ಸೇವಿಸುವದು ಮನಗಂಡು ಪಾವನಾಗಬೇಕು ಉಂಡು ಸವಿಸೂರೆಗೊಂಡು 4 
ಉಂಡು ಮಹಿಪತಿ ನೋಡಿ ಕೊಂಡಾದಿಡಾನಂದಗೂಡಿ ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ5
***