ಶ್ರೀ ವಾದಿರಾಜರ ಕೃತಿ
ರಾಗ : ಅಠಾಣ ಆದಿತಾಳ
ನೆರೆನಂಬಿ ಪಡೆಯಿರೊ ಹಿತವ ನಮ್ಮ
ಗುರುವರ ಮಧ್ವಮುನಿಯ ಸಮ್ಮತವಾ ॥ಪ॥
ತ್ರೈತೆಯೊಳಂಜನೆ ತನಯಾನೆನಿಸೀ
ಸೀತಾರಮಣ ರಘುಪತಿಗಿನ್ನು ಪ್ರೀಯಾ
ದೂತತನದಿ ಖಳತತಿಯ ಕೊಂದು
ಖ್ಯಾತಿ ಪಡೆದ ಶ್ರೀ ಹನುಮನಂಬಾ ಯತಿಯ ॥೧॥
ದ್ವಾಪರದಲಿ ಭೀಮಸೇನಾನೆನಿಸಿ
ಪಾಂಡು-ಭೂಪನರಸಿ ಕುಂತಿ ದೇವಿಯೊಳ್ ಜನಿಸೀ
ಶ್ರೀಪತಿಗರ್ಥಿಯ ಸಲಿಸಿ ದೈತ್ಯ-
ರೂಪ ನೃಪನ ಕೊಂದ ಮುನಿಪನಾ ಭಜಿಸಿ ॥೨॥
ಕಲಿಯುಗದಲಿ ಯತಿಯಾಗಿ ನೋಡಿ
ಇಳೆಯೊಳು ಕುಮತವ ಗೆಲಿದವರಾಗಿ
ಕುಲಗುರು ಶ್ರೀ ಮಧ್ವಯೋಗಿ ನಮ್ಮ
ಬಲು ಹಯವದನನ್ನ ಭಟನೆಂದು ಬಾಗಿ ॥೩॥
***
Nerenambi padeyiro hitava nammaguru madhvamuniya sammatava ||pa||
Treteyolanjanetanayanagisitaramana ragupatigatipriyadutatanadi
Kalatatiya kondukyati padeda hanumantanada yatiya||1||
Dvaparadali bimanenisi pandu-bupanarasi kunti udaradi janisi
Sripatigarthiya salisi daitya-rupa nrupana konda munipana Bajisi||2||
Kaliyugadali yatiyagi I^^ileya dussastrava jaridavaragikulaguru
Madhvapatimuniyogi nammabalu hayavadanana bantanendu bagi||3||
***
ನೆರೆನಂಬಿ ಪಡೆಯಿರೊ ಹಿತವ
ನಮ್ಮಗುರು ಮಧ್ವಮುನಿಯ ಸಮ್ಮತವ ||pa||
ತ್ರೇತೆಯೊಳಂಜನೆತನಯನಾಗಿಸೀತಾರಮಣ
ರಘುಪತಿಗತಿಪ್ರಿಯದೂತತನದಿ
ಖಳತತಿಯ ಕೊಂದುಖ್ಯಾತಿ ಪಡೆದ
ಹನುಮಂತನಾದ ಯತಿಯ||1||
ದ್ವಾಪರದಲಿ ಭೀಮನೆನಿಸಿ ಪಾಂಡು-
ಭೂಪನರಸಿ ಕುಂತಿ ಉದರದಿ ಜನಿಸಿ
ಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ
ನೃಪನ ಕೊಂದ ಮುನಿಪನ ಭಜಿಸಿ||2||
ಕಲಿಯುಗದಲಿ ಯತಿಯಾಗಿ ಈಇಳೆಯ
ದುಶ್ಶಾಸ್ತ್ರವ ಜರಿದವರಾಗಿಕುಲಗುರು
ಮಧ್ವಪತಿಮುನಿಯೋಗಿ ನಮ್ಮಬಲು
ಹಯವದನನ ಬಂಟನೆಂದು ಬಾಗಿ||3||
*****