ಜಗನ್ನಾಥದಾಸರು pallavi?
ಪಾಲಿಸೋ ಪರಮ ಪಾವನ್ನ ಕಮ
ಲಾಲಯ ನಂಬಿದೆ ನಿನ್ನ ಆಹ
ನಖ ತೇಜ
ಮೂರ್ಲೋಕದರಸೆ ನೀನಾಲಯ ಬಿಡದಲೆ ಅ.ಪ
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯಿದೆ ಭಕ್ತ ಪ್ರಿಯ ಸುಖ
ಸಂದೋಹ ಮೂರುತಿ ಆಯ ತಾಕ್ಷ
ಎಂದೆಂದು ಬಿಡದಿರು ಕೈಯ ಆಹ
ವೃಂದಾರ ಕೇಂದ್ರಗೆ ಬಂದ ದುರಿತಂಗಳ
ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ 1
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ಪಾಪ ದೂರ
ದಿರದಿರು ಹರಿಸಪ್ತ ದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ದೇವ ಚರಣ ಆಶ್ರೈಸಿದೆ 2
ಶರಣ ಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿ ಅಪರಾಧ ಜರಿದು
ಪರತರನೆ ನೋಡೆನ್ನ ಕಣ್ತೆರೆದು ಆಹ
ಮರಣ ಜನನಂಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ 3
ಸಂಸಾರ ಸಾಗರ ದೊಳಗೆ ಎನ್ನ
ಹಿಂಸೆ ಮಾಡುವರೇನೊ ಹೀಂಗೆ ನಾನು
ಕಂಸಾರಿ ಅನ್ಯರಿಗೆ ಬಾಗೆ ಮತ್ತೆ
ಸಂಶಯವಿಲ್ಲ ಮಾತಿಗೆ ಆಹ
ಹಂಸ ಡಿಬಿಕರನ್ನು ಧ್ವಂಸ ಮಾಡಿದ ಶೌರಿ
ಮೂರ್ತಿ ದಿವಸ ದಿವಸದಲ್ಲಿ 4
ಭವ ಶಕ್ರಾದ್ಯಮರ ಕೈಯ
ನಿರುತ ತುತಿಸಿಕೊಂಬ ಧೀರ ಶುಭ
ಪರಿಪೂರ್ಣ ಗುಣ ಪಾರಾವರ ಭಕ್ತ
ವಾರಿನಿಧಿಗೆ ಚಂದಿರ ಆಹ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ 5
ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತ ವಿನೋದಿ ಶ
ರಧಿಯೊಳು ಸುರರಿಗೋಸ್ಕರದಿ ನೀನು
ಸುಧೆಯ ಸಾಧಿಸಿ ಉಣಿಸಿದೆ ಆಹ
ಅದುಭೂತ ಭೂಮಿಯ ತೆಗೆದೊಯ್ದುವನ ಕೊಂಡು
ಮುದದಿ ಹಿರಣ್ಯಕನುದರ ಬಗಿದ ಧೀರ 6
ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ
ವಳ ಶಿರ ತರಿದ ಪ್ರವೀಣ ನಿನ್ನ
ಬಲಕೆಣೆಗಾಣೆ ರಾವಣನ ಆಹ
ತಲೆಯನಿಳುಹಿ ಯದುಕುಲದಿ ಜನಿಸಿ ನೀನು
ಲಲನೇರ ವ್ರÀ್ರತವಳಿದಾಶ್ವಾರೂಢನೆ 7
ಮಾನಸ ಪೂಜೆಯ ನೀ ದಯದಿ ಇತ್ತು
ಶ್ರೀನಾಥ ಕಳೆ ಭವವ್ಯಾಧಿ ಕಾಯೋ
ಅನಾಥ ಬಂಧು ಸುಮೋದಿ ಚತುರಾ
ನನಪಿತ ಕೃಪಾಂಬುಧಿ ಆಹ
ತಾನೊಬ್ಬರನರಿಯೆ ದಾನ ವಿಲೋಲನೆ
ಏನು ಮಾಡುವ ಸಾಧನ ನಿನ್ನದೊ ಹರಿ8
ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾವಾಗಬಲ್ಲುದೆ ಹೀಂಗೆ
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸಿ ಕಾಯೋ ಜಗನ್ನಾಥ ವಿಠಲ 9
*********
ಪಾಲಿಸೋ ಪರಮ ಪಾವನ್ನ ಕಮ
ಲಾಲಯ ನಂಬಿದೆ ನಿನ್ನ ಆಹ
ನಖ ತೇಜ
ಮೂರ್ಲೋಕದರಸೆ ನೀನಾಲಯ ಬಿಡದಲೆ ಅ.ಪ
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯಿದೆ ಭಕ್ತ ಪ್ರಿಯ ಸುಖ
ಸಂದೋಹ ಮೂರುತಿ ಆಯ ತಾಕ್ಷ
ಎಂದೆಂದು ಬಿಡದಿರು ಕೈಯ ಆಹ
ವೃಂದಾರ ಕೇಂದ್ರಗೆ ಬಂದ ದುರಿತಂಗಳ
ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ 1
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ಪಾಪ ದೂರ
ದಿರದಿರು ಹರಿಸಪ್ತ ದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ದೇವ ಚರಣ ಆಶ್ರೈಸಿದೆ 2
ಶರಣ ಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿ ಅಪರಾಧ ಜರಿದು
ಪರತರನೆ ನೋಡೆನ್ನ ಕಣ್ತೆರೆದು ಆಹ
ಮರಣ ಜನನಂಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ 3
ಸಂಸಾರ ಸಾಗರ ದೊಳಗೆ ಎನ್ನ
ಹಿಂಸೆ ಮಾಡುವರೇನೊ ಹೀಂಗೆ ನಾನು
ಕಂಸಾರಿ ಅನ್ಯರಿಗೆ ಬಾಗೆ ಮತ್ತೆ
ಸಂಶಯವಿಲ್ಲ ಮಾತಿಗೆ ಆಹ
ಹಂಸ ಡಿಬಿಕರನ್ನು ಧ್ವಂಸ ಮಾಡಿದ ಶೌರಿ
ಮೂರ್ತಿ ದಿವಸ ದಿವಸದಲ್ಲಿ 4
ಭವ ಶಕ್ರಾದ್ಯಮರ ಕೈಯ
ನಿರುತ ತುತಿಸಿಕೊಂಬ ಧೀರ ಶುಭ
ಪರಿಪೂರ್ಣ ಗುಣ ಪಾರಾವರ ಭಕ್ತ
ವಾರಿನಿಧಿಗೆ ಚಂದಿರ ಆಹ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ 5
ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತ ವಿನೋದಿ ಶ
ರಧಿಯೊಳು ಸುರರಿಗೋಸ್ಕರದಿ ನೀನು
ಸುಧೆಯ ಸಾಧಿಸಿ ಉಣಿಸಿದೆ ಆಹ
ಅದುಭೂತ ಭೂಮಿಯ ತೆಗೆದೊಯ್ದುವನ ಕೊಂಡು
ಮುದದಿ ಹಿರಣ್ಯಕನುದರ ಬಗಿದ ಧೀರ 6
ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ
ವಳ ಶಿರ ತರಿದ ಪ್ರವೀಣ ನಿನ್ನ
ಬಲಕೆಣೆಗಾಣೆ ರಾವಣನ ಆಹ
ತಲೆಯನಿಳುಹಿ ಯದುಕುಲದಿ ಜನಿಸಿ ನೀನು
ಲಲನೇರ ವ್ರÀ್ರತವಳಿದಾಶ್ವಾರೂಢನೆ 7
ಮಾನಸ ಪೂಜೆಯ ನೀ ದಯದಿ ಇತ್ತು
ಶ್ರೀನಾಥ ಕಳೆ ಭವವ್ಯಾಧಿ ಕಾಯೋ
ಅನಾಥ ಬಂಧು ಸುಮೋದಿ ಚತುರಾ
ನನಪಿತ ಕೃಪಾಂಬುಧಿ ಆಹ
ತಾನೊಬ್ಬರನರಿಯೆ ದಾನ ವಿಲೋಲನೆ
ಏನು ಮಾಡುವ ಸಾಧನ ನಿನ್ನದೊ ಹರಿ8
ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾವಾಗಬಲ್ಲುದೆ ಹೀಂಗೆ
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸಿ ಕಾಯೋ ಜಗನ್ನಾಥ ವಿಠಲ 9
*********