..
'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ
ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ
ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ
ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ
ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು
ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1
ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ
ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ
ಮೂರ್ಛೆಗೈದು ಮೃತನಾದನು 2
ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ
ಸತತ ದ್ರವ್ಯಗಳ ಕೊಡುವೆನೆಂದು ಸಾರಿಸಿದ
ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ
ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ
ಕೊಡುವೆನೆಂದು ನುಡಿದಾನು 3
ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ
ಕನ್ನಿಕೆಗೆ ಮಾಂಗಲ್ಯ ಬಂಧನ
ಮಾಡಿಹೋದಾರು 4
ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು
ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು
ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ
ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5
ಒಂದು ದಿನ ಸುಂದರಿ ಬಂದವರ ಕೇಳಿದಳು
ಮಂದಗಮನೆ ಇಂದು ದಿವಸಿ ವ್ರತವು ಅಂದರು
ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು
ಬಂಧು ಬಳಗೆ ಇಲ್ಲದಲೆ ಮಾಡುವುದೇನು 6
ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು
ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು
ಹರತಾ ಭಂಡಾರ ಒಡೆದು ಹರುಷಗರೆದನು
ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು
ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು
ಸತತ ನಾರಸಿಂಹನ ಸ್ಮರಣೆ ಮಾಡಿದರು 7
***