Showing posts with label ಚಿಂತೆ ಯಾತಕೋ ಮನವೇ ಶಾಂತನಾಗಿರೋ govinda. Show all posts
Showing posts with label ಚಿಂತೆ ಯಾತಕೋ ಮನವೇ ಶಾಂತನಾಗಿರೋ govinda. Show all posts

Monday, 11 November 2019

ಚಿಂತೆ ಯಾತಕೋ ಮನವೇ ಶಾಂತನಾಗಿರೋ ankita govinda

by ಗೋವಿಂದದಾಸ
ಚಿಂತೆ ಯಾತಕೋ | ಮನವೇ |ಶಾಂತನಾಗಿರೋ ದಿನವೇ ಶಾಂತನಾಗಿರೋಕಂತುಪಿತನ ಧ್ಯಾನಮಾಡುಮುಂತೆಸುಖವ ತೋರಿ ಕೊಡುವ ಪ

ವಿಕ್ರಮದ ರಥದಿ ಭಕ್ತ- |ನಕ್ಕರೆಯ ಸಲಿಸಲೆಂದು |ಚಕ್ರವಿನುತನಾಗಿ ಕುಳಿತು |ಶಕ್ರಸುತನಕಾಯ್ದುದರಿತು 1

ಬಾಲನು ಪ್ರಹ್ಲಾದ ತನ್ನ |ಪಾಲಿಸೆಂದು ಹರಿಯ ಧ್ಯಾನ |ಲೀಲೆಯಿಂದ ಮಾಡುತಿರಲು |ಶ್ರೀಲಲಾಮ ಕಾಯ್ದ ಕೇಳು 2

ಇಂದ್ರಸುತನ ಸುತಭಿಮನ್ಯು |ಅಂದು ಚಕ್ರಬಿಂಬವನ್ನು |ಬಂದು ಮುರಿದು ಕಾದುತಿರೆಗೊೀವಿಂದ ಮುನಿದರಳಿದ ಬೇರೆ 3
******