Showing posts with label ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ bheemashankara. Show all posts
Showing posts with label ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ bheemashankara. Show all posts

Friday, 6 August 2021

ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara

ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ |ಭೃಕುಟಿ ಮಧ್ಯದಲಿ ಪ್ರಕಟವಾಗಿದೆ ಉದಯವಾಗಿ ರೂಪ ಪ

ನಾಸಿಕಾಗ್ರದಲಿ ವಾಸವಾಗಿದೆ ಬೀಸುವ ಗಾಳಿಗೆ ಭಿನ್ನವಿಲ್ಲದೆ |ಏಸೇಸು ದಿನ ತಪವ ಮಾಡಿದರೂ ಯೋ- ಗೇಶ್ವರ ಮುನಿಗೆ ದುರ್ಲಭ 1

ಝೇಂಕರಿಸುವದಾ ನಾದ ನೆತ್ತಿಯೊಳು ಓಂಕಾರ ಶಬ್ದವು ಶೂನ್ಯವಾಗದೆ |ಶಂಕರ ಸ್ವರೂಪ ತಿಳಿದ ದತ್ತನ ಬೀಜಮಂತ್ರ ಅಂಕುರದಿಂದೆ2

***