Showing posts with label ಶರಣ ಜನರ ಕಲ್ಪತರುವೆ ನಿನ್ನ ಕರುಣಾದಿ ಪೊರಿ ಎನ್ನ ಗುರುವೇ gurujagannatha vittala. Show all posts
Showing posts with label ಶರಣ ಜನರ ಕಲ್ಪತರುವೆ ನಿನ್ನ ಕರುಣಾದಿ ಪೊರಿ ಎನ್ನ ಗುರುವೇ gurujagannatha vittala. Show all posts

Wednesday, 1 September 2021

ಶರಣ ಜನರ ಕಲ್ಪತರುವೆ ನಿನ್ನ ಕರುಣಾದಿ ಪೊರಿ ಎನ್ನ ಗುರುವೇ ankita gurujagannatha vittala

..

ಶರಣಜನರ ಕಲ್ಪತರುವೆ ನಿನ್ನ

ಕರುಣಾದಿ ಪೊರಿ ಎನ್ನ ಗುರುವೇ ಪ


ಶರಣರಿಲ್ಲದೆ ಕರುಣಿಸೆಂದು

ಶರಣು ಪೊಕ್ಕೆನೊ ಚರಣ ಕಮಲಕೆ

ಶರಣೆಂದೂ ಕರುಣದಿಂದಲಿ

ಕರುಣಿಸೆನ್ನನು ಕರುಣಸಾಗರ ಅ.ಪ


ತಾಪತ್ರಯದಿ ಬಹುಬೆಂದೇ ಭವ -

ಕೂಪಾರದೊಳಗತಿ ನೊಂದೇ

ಪಾಪಮೋಚಕ ನಿಷ್ಪಾಪಿ - ಜನರ ಪಾಲ

ಕಾಪಾಡೊ ನೀ ಎನ್ನ ಅಪಾರ ಮಹಿಮನೆ

ದ್ವಾಪರದಿ ಯದುವರನು ಸಾಂ -

ದೀಪಪುತ್ರನ ತೋರಿ ಕಾಯ್ದನು

ಭೂಪ ಬಕನಳಿದು ಸಲಹಿದ -

ನಾಪರಿಯಲಿ ಎನ್ನಸಲಹೋ 1


ಕಾಮಿತ - ಫಲದ ನೀನೆಂದೂ ಬಲು -

ಪ್ರೇಮಾದಿ ಬಳಿಗೆ ನಾ ಬಂದೂ

ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -

ತಾಮರಸವ ಮನೋ - ಧಾಮಾದಿ ನಿಲಿಸೆಂದೆ

ರಾಮ ಕೌಶಿಕÀ ಮಖವ ಕಾಯ್ದನು

ಭೀಮ ವಿಪ್ರರ ಭೀತಿ ಬಿಡಿಸಿದ

ಧೂಮಕೇತನನುಂಡು ಕೃಷ್ಣನು

ಆಮಹದ್ಭಯ ಕಳದ ತೆರದಿ 2


ತಾತ ನಿನ್ನನು ಬಾಧೆ ಬಡಿಸೇ ಶಿರಿ -

ನಾಥ ತಾ ಬಂದಾಗ ಬಿಡಿಸೆ

ದಾತ ಗುರುಜಗನ್ನಾಥ ವಿಠಲನತಿ

ಪ್ರೀತಿಯಿಂದಲಿ ನಿನ್ನ ಮಾತು ಕೇಳಿದತೆರ

ಮಾತು ಲಾಲಿಸಿ ಕಾಯೋ ಯತಿಕುಲ -

ನಾಥ ಎನ್ನಪರಾಧ ನೋಡದೆ

ಭೀತಿಯನು ಸದೆದು ಪಾಲಿಸ -

ನಾಥರಕ್ಷಕನಲ್ಲೆ ಗುರುವರ 3

***