Showing posts with label ಬಾಧಕರೊಳು ಬದ್ಧನು ಮಧುಸೂದನ ಭಕ್ತಿಗೆ ದೃಢವಿಲ್ಲದವನು gurumahipati. Show all posts
Showing posts with label ಬಾಧಕರೊಳು ಬದ್ಧನು ಮಧುಸೂದನ ಭಕ್ತಿಗೆ ದೃಢವಿಲ್ಲದವನು gurumahipati. Show all posts

Wednesday 1 September 2021

ಬಾಧಕರೊಳು ಬದ್ಧನು ಮಧುಸೂದನ ಭಕ್ತಿಗೆ ದೃಢವಿಲ್ಲದವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಾಧಕರೊಳು ಬದ್ಧನು | ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ 


ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು | ಹರಿಪರದೈವೆಂದು ಹೇಳುವನು | ದುರಿತವು ಬಂದಡೆ ನೀಚದೈವಂಗಳಿ | ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ 1 

ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ | ನೃಪರ ವಾಲ್ಗೈಸುವನು | ಈ ನಿಖಿಳದ ವೃತ ಜಪ ತಪವನು ಮಾಡೀ | ನಾನೆಂಬ ಹಮ್ಮಿಲಿ ಪರರನು ಹಳಿವಾ 2 

ವಾಸುದೇವ ಸರ್ವಯಂಬುವ ದೇವರ | ದಾಸರ-ಸೂಯದಿ ಬಾಳುವನು | ಲೇಸಾಗಿ ಗುರುವರ ಮಹಿಪತಿಸ್ವಾಮಿಯ | ಧ್ಯಾಸವಿಲ್ಲದೆ ವಣಡಂಬದಲ್ಲಿಹನು 3

***