Showing posts with label ಕೇಳು ಕೋಪಿಸಬೇಡ ಮಂತ್ರಾಲಯ ಪ್ರಭುವೇ janakiramana. Show all posts
Showing posts with label ಕೇಳು ಕೋಪಿಸಬೇಡ ಮಂತ್ರಾಲಯ ಪ್ರಭುವೇ janakiramana. Show all posts

Monday, 6 September 2021

ಕೇಳು ಕೋಪಿಸಬೇಡ ಮಂತ್ರಾಲಯ ಪ್ರಭುವೇ ankita janakiramana

ರಾಗ: ಮೋಹನ ತಾಳ: ಝಂಪೆ


ಕೇಳು ಕೋಪಿಸಬೇಡ ಮಂತ್ರಾಲಯ ಪ್ರಭುವೇ

ಪೇಳಲಂಜುವೆ ನಿಮ್ಮ ದಿವ್ಯಚರಿತೆ


ಆಲಿಸಿ ಕೇಳುತ್ತ ಭಕುತನಿಗೊಲಿದು

ಪಾಲಿಸು ದರುಶನವ ನೀ ಯನಗೆ ಧೊರೆಯೇ ಅ. ಪ


ಕೃತಯುಗದಿ ಹಿರಣ್ಯಕನ ಪುತ್ರನಾಗಿ ಜನಿಸಿ

ನಿತ್ಯ ಶ್ರೀ ಹರಿಯನ್ನೇ ಭಜಿಸಿ

ಎತ್ತನೋಡಿದರತ್ತ ಶ್ರೀಹರಿಯುಇಹನೆಂದು

ಗತ್ತಿನಿಂದಲಿಪೇಳುತ

ಪಿತನೆಂಬ ಅಭಿಮಾನ ಎಳ್ಳಷ್ಟು ಇಲ್ಲದೆಲೆ

ಕಂತುಪಿತನಿಂದವನ ಕೊಲ್ಲಿಸಿದ ಪರಿಯ 1

ತ್ರೇತೆಯಲಿ ರಾವಣನ ಅನುಜನಾಗಿ ಪುಟ್ಟಿ

ಮತ್ತೆ ಬುದ್ಧಿಯಪೇಳಿ ಘಾಸಿಪಟ್ಟಿ

ಸತಿಯ ಪುಡುಕಲು ಬಂದ ರಾಮರ ಪಾದವನು

ಗತಿಯನೇತೋರೆಂದು ಪಿಡಿದಿ

ಪಿತನಸಮನು ಅಣ್ಣನೆಂಬ ಭಾವವನಳಿದು

ಆತನ ರಕ್ಷಿಸದೆ ಕೊಲ್ಲಿಸಿದ ಪರಿಯ 2

ಕಲಿಯುಗದಿ ಅವತರಿಸಿ ಯತಿಯಾಗಿ ಸಂಚರಿಸಿ

ಒಳ್ಳೆ ಗ್ರಂಥಗಳ ರಚಿಸಿ 

ಸಿಲುಕಿ ಭಕುತರಬಲೆಗೆ ಬೇಡಿದಾವರವಿತ್ತು 

ಬಳಲಿ ಬೇಸರಿಕೆಪಟ್ಟು

ಚಲುವ ಜಾನಕಿರಮಣ ಮೂಲರಾಮರ ಸ್ಮರಿಸೆ

ಸ್ಥಳಕಾಗಿ ಬೃಂದಾವನಸೇರ್ದ[ಹೊಕ್ಕ]ಪರಿಯ 3

****