Showing posts with label ಪಾರು ಮಾಡೋ ಸತ್ಯಧೀರನೆ ನಿನ್ನಯ hanumesha vittala satyadheera teertha stutih. Show all posts
Showing posts with label ಪಾರು ಮಾಡೋ ಸತ್ಯಧೀರನೆ ನಿನ್ನಯ hanumesha vittala satyadheera teertha stutih. Show all posts

Tuesday, 1 June 2021

ಪಾರು ಮಾಡೋ ಸತ್ಯಧೀರನೆ ನಿನ್ನಯ ankita hanumesha vittala satyadheera teertha stutih

 ಶ್ರೀ ಸತ್ಯಧೀರರು

ಪಾರು ಮಾಡೋ ಸತ್ಯಧೀರನೆ ನಿನ್ನಯ ಚಾರು

ಚರಣಗಳಿಗೆರಗುವೆನು ಪ


ಘೋರಮಾಯದ ಸಂಸಾರದೊಳಗೆ ಈಸಲಾರೆನೊ

ವರಮತಿಗುಣಗನ ಮಣಿಯೆ ಅ.ಪ.


ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ

ಮತಿಹೀನರಪಹಾಸ್ಯ ಮಾಡಿದರೆ

ಸತತ ದಶಮಾಷ್ಟ ವರ್ಷಗಳ ಪರಿಯಂತ ಹರಿಸೇವೆಯಾ

ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ

ಹಿತದಿಂದ ಕೈಗೊಂಡ ದಶರಥನಂದ ರಘುರಾಯ

ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ

ಭಕುತರನು ಕರೆವುತಲಿ ಬರುತಿರುವಂತೆ ನಿನ್ನಯ

ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1


ವರಮಧ್ವಮತಾಭಿಮಾನಿಯೆ ನಿನ್ನಯ

ದರುಶನದಿಂದ ಪಾವನನಾದೆನೋ

ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ

ವರಸೇವಾ ಸರ್ವಜ್ಞ ಪೀಠಕೆ

ಸರಸ ಶೋಭಿಸುವಾ ಹರಿವಾಯುಗಳಲಿ

ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ

ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ

ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2


ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ-

ನಂದಗಿತ್ತಿ ಉತ್ತಮಪದವಾ

ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ

ಅನುಮಾನ ಮಾಡದೇ ಪಾಲಿಸೋ ದೇವಾ

ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ

ಬಿಡಿಸೊ ದುರ್ಭಾವನಜ ಸಂಭವಾ ಧೀರ ಶ್ರೀಹನುಮೇಶವಿಠಲ

ಸೇವಕನೋ

ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3

*****