ತರುತಾರೆಂದು ತಿಳಿಯೆ ತವಕದಿಬಾಳೆಯಸುಳಿಯೆಚಂದಿರನಂತೆ ಹೊಳೆಯುತ ಲೋಕ ಸುಂದರಿ ಭೃಂಗ ಕುಂತಳೆಯರು ಮುಯ್ಯ ತಂದಾರೆಂದು ಪ.
ಅಂದದ ವಸ್ತವಧರಿಸಿ ದೂತೆ ಚಂದದ ಸೀರೆ ಶೃಂಗರಿಸಿಇಂದಿರೇಶಗೆ ನಮಸ್ಕರಿಸಿತಾನು ಬಂದಾಳೆ ದ್ರೌಪತಿ ಸ್ಮರಿಸಿ 1
ಬಾಗಿಲಿಗೆ ಬಂದಾಳು ನೋಡಿದ್ವಾರಪಾಲಕಗೆ ಉಚಿತವ ಹೇಳಿಹೊನ್ನುಂಗುರಆತಗೆ ನೀಡಿಒಳಗೆ ಪೋದಳು ಹರಿಯ ಕೊಂಡಾಡಿ2
ವಂದಿಸಿ ಯದುನಾಥನಢಿಗೆಮಂದಹಾಸವ ಬೀರಿದೂತೆಯಡೆಗೆಬಂದಾರೈವರೆಂಬೊ ನುಡಿಗೆಆನಂದ ಬಟ್ಟ ಕೃಷ್ಣ ಬ್ಯಾಗನೆ3
ವೇಗದಿ ರುಕ್ಮಿಣಿಗೆಬಾಗಿ ಸುದ್ದಿ ಹೇಳಿ ಮುಯ್ಯದ ಬಗಿ ಬಗಿನಾಗವೇಣಿಯು ಹರುಷಾಗಿಕರೆಯ ಬರತೇವಂತ್ಹೇಳೆ ಹೋಗಿ4
ಸತ್ಯಭಾಮೆಗೆ ಶರಣೆಂದು ಕೃಷ್ಣ ತರತಾಳೆ ಮುಯ್ಯಾವೆಂದು ಅರ್ಥಿ ವಿನೋದಾ ಒಂದೊಂದುಹೊನ್ನ ಪುತ್ಥಳಿ ಮನಕೆ ತಾರೆಂದು 5
ಗುರ್ತು ಹೇಳುವೆ ಕೇಳೊ ದೊರೆಯೆ ಕೃಷ್ಣಚರ್ಚೆ ಮಾತಿನ ಚಮತ್ಕಾರಿಯೆಶೃತ್ಯರ್ಥದಾ ಮಳೆಗರಿಯೆಪ್ರತಿಯುತ್ತರವಕೊಡೋದು ಮರಿಯೆ 6
ಕೋಕಿಲ ಸ್ವರದಂತೆ ಅಳಕು ಹರುಷಾಗಿರಾಮೇಶಗ್ಹಾಕಿ ಮಲಕುಆಗಮಾ ತರತಾಳೆ ಮಲಕುಎಲ್ಲಾ ನಾರಿಯರು ಅಕೆಗೆ ಅಳಕು 7
****