Showing posts with label ಶ್ರೀದ ವಿಠಲ ಸರ್ವಾಂತರಾತ್ಮಾ jagannatha vittala. Show all posts
Showing posts with label ಶ್ರೀದ ವಿಠಲ ಸರ್ವಾಂತರಾತ್ಮಾ jagannatha vittala. Show all posts

Saturday, 14 December 2019

ಶ್ರೀದ ವಿಠಲ ಸರ್ವಾಂತರಾತ್ಮಾ ankita jagannatha vittala

ಜಗನ್ನಾಥದಾಸರು
ಶ್ರೀದ ವಿಠಲ ಸರ್ವಾಂತರಾತ್ಮಾ
ನೀ ದಯದಿ ಒಲಿದು ನಿತ್ಯದಲಿ ಕಾಪಾಡುವುದು ಪ

ಚಿಕ್ಕ ತನದಲಿ ತಂದೆತಾಯಿಗಳು ಒಲಿದು ಪೆಸ
ರಿಕ್ಕಿ ಕರೆದರು ನಿನ್ನ ದಾಸನೆಂದೂ
ಮಕ್ಕಳನು ತಾಯ್ಸಲಹುವ ತೆರದಿ ಸಂತೈಸು 1

ಶುಕನಯ್ಯ ನಿನ್ನ ಪದಭಕುತಿ ತ್ವತ್ಕಥಾಶಾಸ್ತ್ರ
ಯುಕುತಿವಂತರ ಸಂಗಸುಖವನಿತ್ತು
ವಕಿತನಯ ನಿನ್ನವರ ಮುಖದಿಂದ ಪ್ರತಿದಿನದಿ 2

ಮಾತರಿಶ್ವಪ್ರಿಯ ಸುರೇತರಾಂತಕನೆ ಪುರು
ಹೂತನಂದನಸಖ ನಿರಾತಂಕದಿ
ನೀ ತೋರು ಮನದಿ ಸಂಪ್ರೀತಿಯಿಂದಲಿ ಒಲಿದು
ಹೋತಾಹ್ವಗುರು ಜಗನ್ನಾಥ ವಿಠಲ ಬಂಧು 3
*******