ಮೊದಲಗಟ್ಟಿ ಪ್ರಾಣದೇವರು
ಬಂದು ಬಂದು ಬೇಡಿಕೊಳ್ಳಿರೊ ಭಕ್ತಿಯಿಂದ
ಮೊದಲಗಟ್ಟಿ ಪ್ರಾಣದೇವರ
ಬಂದು ಬಂದು ಬೇಡಿಕೊಳ್ಳಿ ಭಂಗಗಳ ಕಳೆಯೆಂದು
ಸಂದೇಹವಿಲ್ಲದೆ ಕುಂದುಗಳನೆ ಪರಿಹರಿಪ||ಪಲ್ಲ
ರಾಮಭಕ್ತನಾಗಿ ತಾನು ಧೀಮದಿಂದ ನಿಂತಿರುವ
ಕಾಮಿತಾರ್ಥಗಳನೆಇತ್ತು ಪ್ರೇಮದಿಂದ ಸಲಹುತಿರುವ||೧||
ವೀರನಾಗಿ ವಾರುಧಿನ್ಹಾರಿ ನಾರಿ ಜಾಡ ತಿಳಿದು ತಂದು
ಭೀಮನಾಗಿ ಕೌರವರ ಕುಲವನೆಲ್ಲ ಸವರಿ ಬಂದು||೨||
ರಾಮದೂತನಾಗಿ ಬಂದು ಭೀಮಸೇನನಾಗಿ ನಿಂತು
ಮಧ್ವರಾಗಿ ಮಧ್ವೇಶಕೃಷ್ಣನ ಭಜಿಸಿದಂಥ||೩||
***********