Showing posts with label ಕೇಳೊ ಗೋವಿಂದ ಹೇಳಿದರಂತು ಬಲು ಚಂದ ramesha. Show all posts
Showing posts with label ಕೇಳೊ ಗೋವಿಂದ ಹೇಳಿದರಂತು ಬಲು ಚಂದ ramesha. Show all posts

Wednesday, 4 August 2021

ಕೇಳೊ ಗೋವಿಂದ ಹೇಳಿದರಂತು ಬಲು ಚಂದ ankita ramesha

 ..

ಕೇಳೊ ಗೋವಿಂದ ಹೇಳಿದರಂತು ಬಲು ಚಂದ ಇಂದಿರೇಶನ ಗುಣ ಚಂದಿಲ್ಲಚಾರವಿಲ್ಲ ಅಂದರೆಭಾಳ ಬಲುಕೋಪ ಕೇಳೊ ಗೋವಿಂದ ಪ


ಭೇರಿ ಬಾರಿಸಿ ಕೇಳುತ ಭೂರಿಜನರ ಕೂಡಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಖಳರ ಸಂಹಾರ ಮಾಡಿದ ಮಧುರೆಯಲಿ ಕೇಳೊ 1

ಹೊರಗಿಂದ ಬಂದಳು ತಿರುಗಲ ತಿಪ್ಪಿಯು ಹೆರವರಿಗುಪಕಾರಿ ಮನೆಗೆ ಮಾರಿ ಹೆರವರಿಗುಪಕಾರಿ ಮನೆಗೆ ಮಾರಿ ಮಕ್ಕಳ ಕೊರಳ ಹಿಚುಕಿ ಕೊಂದಳು2

ತಲೆಹೊೈಕ ಹಿರಿಯವ ಚಿಕ್ಕವ ಚಂಚಲ ಬಹು ಚಾಡಿಕೋರ ಇನ್ನೊಬ್ಬಬಹು ಚಾಡಿಕೋರ ಇನ್ನೊಬ್ಬ ಎನುತಲಿಫಲ್ಗುಣ ನಗುತ ನುಡಿದನು 3

ಇಂದ್ರಲೋಕಕೆ ಹೋಗಿ ಸುರತರು ತರುವಾಗ ಇಂದ್ರ ಬಂದಿದ್ದ ಜಗಳಕ್ಕೆÀಇಂದ್ರ ಬಂದಿದ್ದ ಜಗಳಕ್ಕೆ ಆಗನಮ್ಮಕ್ಕನಿಂದ ಮಾನ ಉಳಿದೀತೊ4

ನಿಲ್ಲೊ ನಿಲ್ಲೊ ನಿನ್ನ ಸೊಸೆ ಎಂಬೊಳು ತಾನು ಎಲ್ಲರ ಬಾಯಿಗೆ ಬರವೋಳು ಎಲ್ಲರ ಬಾಯಿಗೆ ಬರುವೋಳು ಇದರ ಮ್ಯಾಲೆ ಒಳ್ಳೇದೊ ನಿನ್ನ ಒಗೆತನ 5

ಬಲು ಪತಿವ್ರತೆಯೆಂದು ಜನರೆಲ್ಲ ಹೊಗಳೋರು ತಲೆಯಲ್ಲಿ ಹೊತ್ತ ಮಹಾದೇವತಲೆಯಲ್ಲಿ ಹೊತ್ತ ಮಹಾದೇವ ಇಂಥವಳ ಬಲುಗುಣವಂತೆ ಎನಬಹುದೆ 6

ಅಚ್ಯುತ ನೀನೊಬ್ಬ ಹುಚ್ಚಾಗೊ ಹುರುಳಾಗೊಮೆಚ್ಚಿದವರೆಲ್ಲ ನಿನಗುಣ ಮೆಚ್ಚಿದವರೆಲ್ಲ ನಿನಗುಣ ಕಲಿತಮ್ಯಾಲೆ ಉಚ್ಚ ರಾಮೇಶನ ಒಗೆತನ ಕೇಳೊ ಗೋವಿಂದ7

****