ಸಂತರೆನಬಹುದುದಯ್ಯ ಇಂತಿವರಿಗೆ ಅಂತರಂಗಲಿ ಹರಿಯ ಏಕಾಂತ ಭಕ್ತರಿಗೆ ಪ
ಸುಖಕ ಮೈಯವ ಮರಿಯಾ ದು:ಖಗಳಿದಿರಿಡೆ ನೋಯಾ ಚಕಿತನಾಗನು ಕುಮತಿ ವಿಕಳ ನುಡಿಗೆ ಪ್ರಕಟಸ್ತೋತ್ರಕ ಹಿಗ್ಗ ನಿರಹಂಕೃತಿಯನ್ನುಳ್ಳರಿಗೆ 1
ಕ್ಲೇಶ ಕರ್ಮಗಳಿರಲು ಈ ಶಿರಿಯ ಸುಖದ ಮನದಾಶೆವಿರಲು ವಾಸುದೇವನ ಪದ ಧ್ಯಾಸದನುಭವ ದಿಟ ವೇಶ ಹರಿ ಸಂಸಾರ ಲೇಶದೋರ್ವರಿಗೆ 2
ಪರಮ ಭಾಗವತೆನಿಸಿ ಪರರ ಮನಗಳಿಗ್ಹೋಗಿ ಕರ ವಿಕರ ಪರಸತಿಯರಿಗೆ ಕೂರವು ಪರನಿಂದೆಗೆ ಮೂಕ ಪರವಶಾದರಿಗೆ 3
ಹರಿಯ ನಾಮವ ನೆನಿದು ಹರಿದು ಕೀರ್ತನೆಯಲ್ಲಿ ಹರುಷಗುಡಿಗಟ್ಟಿ ತನುಮರದು ನಿಂದು ಬರುದೆ ಪ್ರೇಮಾಂಜಲಿಗೆ ಭರಿತ ಲೋಚನನಾಗಿ ತರಿಸಿ ತಾರಿಸುವಂದ್ಯನ ಕರುಣವಂತರಿಗೆ 4
ಇಂತು ದುರ್ಗಮವಿರಲು ಸಂತರಾವು ನೀವೆಂದು ಸಿರಿತರವ ಹೋಗಿ ಜನ ಸಿಂತರಿಸುವಾ ಭ್ರಾಂತವೇಷಕ್ಕೆ ಸಿರಿಕಾಂತ ಮೆಚ್ಚನಲ್ಲಾ ಶಾಂತಗುಣ ಮಹಿಪತಿ ಸ್ವಂತಗೆಂದಾ 5
***