Showing posts with label ಶೇರಿ ಸುಖಿಸು ಮಾನವ ಗುರುಚರಣ ಸರೋಜವ karpara narahari. Show all posts
Showing posts with label ಶೇರಿ ಸುಖಿಸು ಮಾನವ ಗುರುಚರಣ ಸರೋಜವ karpara narahari. Show all posts

Monday, 2 August 2021

ಶೇರಿ ಸುಖಿಸು ಮಾನವ ಗುರುಚರಣ ಸರೋಜವ ankita karpara narahari

ಶೇರಿ ಸುಖಿಸು ಮಾನವ ಗುರುಚರಣ ಸರೋಜವ ಪ


ಶೇರಿದ ಶರಣರ ಘೋರ ಪಾತಕವೆಂಬೊ

ವಾರಿದ ಗಣಕೆ ಸಮೀರ ಜಗನ್ನಾಥ

ಸೂರಿವರ್ಯ ದಾಸಾರ್ಯರಂಘ್ರಿಯನುಅ.ಪ


ತಾರತಮ್ಯವ ತಿಳಿಯದೀ ಕಲಿಯುಗದಿ ಮುಕ್ತಿ

ದಾರಿಗಾಣದೆ ಭವದಿ ಬಿದ್ದ ಸಜ್ಜನೋ-

ದ್ದಾರ ಮಾಡಲು ದಯದಿ ಬ್ಯಾಗವಾಟದಿ

ನಾರ ಸಿಂಹಾಖ್ಯ ವಿಪ್ರಾಗಾರದೊಳುದ್ಭವಿಸಿ

ಶ್ರೀರಮಾಪತಿಯ ಚಾರು ಕಥಾಮೃತ

ಸಾರವಧರೆಯೊಳು ಬೀರಿದಂಥವರ 1


ಮೇದಿನಿಯೊಳು ಚರಿಸಿ ವ್ಯಾಕ್ಯಾರ್ಥದಿ ಬಹುದು-

ರ್ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ

ಭೋಧ ಮತಾಬ್ಧಿಗೆ ಶಶಿ ನೃಪಮಾನ್ಯರೆನಿಸಿ

ಶ್ರೀದ ಪ್ರಹ್ಲಾದಾನುಜ ಸಲ್ಹಾದರೆ ಇವರೆಂದು

ಸಾದರದಿ ಬಿಡದೆ ಪಾದ ಪಂಕಜಾ ರಾಧಕರಿಗೆಸುರ

ಪಾದಪರೆನಿಪರ 2


ಕ್ಷೋಣಿ ವಿಬುಧ ಗಣದಿ ಸೇವೆಯಕೊಳುತ

ಮಾನವಿಯೆಂಬೊ ಕ್ಷೇತ್ರದಿ ಮಂದಿರ ಮಧ್ಯ

ಸ್ಥಾಣುವಿನೊಳು ಮುದದಿ ಕಾರ್ಪರವೆಂಬೊ

ಕಾನನದಲಿ ಕೃಷ್ಣಾವೇಣಿ ಕೂಲದಿ ಮೆರೆವ

ಶ್ರೀನಿಧಿ ನರ ಪಂಚಾನನಂಘ್ರಿಯುಗ

ಧ್ಯಾನದಿ ಕುಳಿತ ಮಹಾನುಭಾವರನು 3

****