Showing posts with label ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಸುಲಭನೆಂದಾಡುವರು ಹರಿದಾಸರೆಲ್ಲ gadugina veeranarayana. Show all posts
Showing posts with label ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಸುಲಭನೆಂದಾಡುವರು ಹರಿದಾಸರೆಲ್ಲ gadugina veeranarayana. Show all posts

Wednesday, 1 September 2021

ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಸುಲಭನೆಂದಾಡುವರು ಹರಿದಾಸರೆಲ್ಲ ankita gadugina veeranarayana

 ..

kruti by ವೀರನಾರಾಯಣ Veeranarayana 


ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ


ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ.


ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ 1


ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ 2


ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ವೀರನಾರಾಯಣನು ಅಚಲ 3

***