ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ
ದುರ್ವಿಯೊಳು ಜನಿಸಿದೆನು ಕ್ರಷ್ಣಾ
||ಪೂರ್ವ ಜನ್ಮದಲಿ||
ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ
ಹರಿ ವಾರಿಜನಾಭ ಶ್ರೀಕೃಷ್ಣ||ಕಾರುಣ್ಯ||
||ಪೂರ್ವ ಜನ್ಮದಲಿ||
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ
ಕಷ್ಟ ಪಡುತಿಹೆನಯ್ಯ ಕ್ರಷ್ಣಾ
ದಟ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು
ತಟ್ಟುವುದು ನಿನಗಯ್ಯ ಕ್ರಷ್ಣಾ
||ಹುಟ್ಟಿದಂದಿಂದಿಗು||
ಕಾಸಿನ ಆಸೆಯನು ಮಾಡಿ ಬಹುದಿನದಿಂದ
ಆಯಾಸದೊಳಗಿಹೆನು ಕ್ರಷ್ಣಾ
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು
ಸಾಸಿರ ನಾಮದ ಶ್ರೀಕೃಷ್ಣಾ||ಆಸೆಯನು||
||ಪೂರ್ವ ಜನ್ಮದಲಿ||
ಮುಟ್ಟಲಂಜುವರು ಬಂಧುಗಳು ಕಂಡರೆ ಎನ್ನ
ಅಟ್ಟಿಕೊಳುತಿಹರಯ್ಯ ಕ್ರಷ್ಣಾ
ತೊಟ್ಟಿಲ ಶಿಸು ಬಾಯ ಬಿಡುವತೆರದಂತೆ
ಕಂಗೆಟ್ಟು ಶೋಕಿಸುವೆನು ಕ್ರಷ್ಣಾ
||ಮುಟ್ಟಲಂಜುವರು||
ತಂದೆತಾಯಿಯು ಇಲ್ಲ ಬಂಧುಬಳಗವು ಇಲ್ಲ
ಇಂದೆನಗೆ ಗತಿಯೇನು ಕ್ರಷ್ಣಾ
||ತಂದೆತಾಯಿಯು||
ಮಂದರಧರ ಶ್ರೀ ಪುರಂದರವಿಠ್ಠಲ
ನೀ ಬಂಧು ನೆಲೆಯಾಗಯ್ಯ ಕ್ರಷ್ಣಾ
||ಮಂದರಧರ||
||ಪೂರ್ವ ಜನ್ಮದಲಿ||
ಕ್ರಷ್ಣಾ. ......ಕ್ರಷ್ಣಾ. .....ಕ್ರಷ್ಣಾ. ....ಕ್ರಷ್ಣಾ. .....
***
pallavi
pUrva janmadali nA mADida aghadinda uRviyoLu janisideno krSNa kAruNya nidhiyenna kAyabEkayya hari vArijanAbha shrI krSNa
caraNam 1
huTTidandindigU sukhavembudanu ariye kaSTavAgirutihudu krSNa
daTTa dAridaryavanu pariharisadire dUru taTTuvudu ninagayya krSNa
caraNam 2
kAsinA Aseyanu mADi bahu dInadindA yAsadoLagirutiheno krSNa
Aseyanu biDisi mige dOSavanu parihariso sAsira nAma shrI krSNa
caraNam 3
muTTalanjuvaru bandhugaLu kaNTare enna aTTi koludiharayya krSNa
toTTila shishu bAya biDuva teranante kangeTTu shOkisuveno krSNa
caraNam 4
I pariyinda nAnApattu pELidara nAthanna kAyadidEko krSNa
shApisuvenendare sAvu huTTu ninagilla Esu doredanavayya krSNa
caraNam 5
tande tAyiyu illa bandhu baLagavu illa indEnu tErahELe krSNa
mandaradhara shrI purandara viTTala nI bandu neleyAgayya krSNa
***