Showing posts with label ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ purandara vittala DAARI YAAVUDAYYA VAIKUNTAKE DAARI TORISAYYA. Show all posts
Showing posts with label ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ purandara vittala DAARI YAAVUDAYYA VAIKUNTAKE DAARI TORISAYYA. Show all posts

Saturday 18 December 2021

ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ purandara vittala DAARI YAAVUDAYYA VAIKUNTAKE DAARI TORISAYYA






On Krishna

ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ||pa||

ದಾರಿ ಯಾವುದಯ್ಯ ದಾರಿ ತೋರಿಸಯ್ಯ ಆ-
ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ||a.pa||

ಬಲು ಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಹೊಳೆವಂಥ ದಾರಿಯ ತೋರೊ ನಾರಾಯಣ||1||

ಪಾಪ ಪೂರ್ವದಲ್ಲಿ ಮಾಡಿದುದಕೆ
ಲೇಪವಾಗಿದೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪನಾರಾಯಣ||2||

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ
ಪನ್ನಗಶಯನ ಶ್ರೀ ಪುರಂದರವಿಠಲ
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ||3||
***

rAgA:  kalyANi.  aTa tALA (raga tala may differ in audio)

dariyavudayya vaikuntake dari torisayya l
adhara muruti ninna pada seruvudakke
dariyavudayya dari trrisayya ll

anubhavada anubhavadi kattaleyolu
balu anjuve nadugi l
balalutta tirugide hadiya kanade
holevanta dariya toro narayana ll

papa purvadalli maadidudakke lepavagide karma l
i pariyindali ninna nenesikombe
Sripati salahenna dhupa narayana ll

innu na janisalare bhumiyamele ninna dasanadeno l
pannagashayana Sri purandaravittala
innu puttisadiru enna narayana ll
***


Dari yavudayya vaikunthake dari torisayya||pa||

Dari yavudayya dari torisayya A-
Dhara muruti ninna pada seruvudakke||a.pa||

Balu bavadanubavadi kattaleyolu
Balu anjute nadugi
Balalutta tirugide hadiya kanade
Holevantha dariya toro narayana||1||

Papa purvadalli madidudake
Lepavagide karma
I pariyindali ninna nenesikombe
Sripati salahenna bupanarayana||2||

Innu na janisalare bumiya mele
Ninna dasanadeno
Pannagasayana sri purandaravithala
Innu puttisadiro enna narayana||3||
***
 
pallavi

dAri yAvudayya vaikuNThakke hAdi tOrisayya

anupallavi

dAri yAvudayya dAri tOrisayya AdhAra mUruti ninna pAda sEruvudakke

caraNam 1

balu bhavadhanubhavadi kattaleyoLu balu anjute naDugi baLanuta
tirugide hAtiya kANade hoLevanda dAriya tOro nArAyaNa

caraNam 2

pApa pUrvadalli mADidudake lEpavAgide karma I pariyindali
ninna nenasikombe shrIpati salahenna bhUpa nArAyaNa

caraNam 3

innu nA janisalAre bhUmiya mEle ninna dAsanAdenO
pannaga shayana purandara viTTala innu puTTisadiro enna nArAyaNa
***

P:  dAri yAvudayya vaikuNThakke hAdi tOrisayya

A:  dAri yAvudayya dAri tOrisayya AdhAra mUruti ninna pAda sEruvudakke

C1:  balu bhavadhanubhavadi kattaleyoLu balu anjute naDugi baLanuta

tirugide hAtiya kANade hoLevanda dAriya tOro nArAyaNa

   2:  pApa pUrvadalli mADidudake lEpavAgide karma I pariyindali

ninna nenasikombe shrIpati salahenna bhUpa nArAyaNa

   3:  innu nA janisalAre bhUmiya mEle ninna dAsanAdenO

pannaga shayana purandara viTTala innu puTTisadiro enna nArAyaNa
*******

ದಾರಿಯಾವುದಯ್ಯ ವೈಕು೦ಠಕೆ ದಾರಿ ತೂರಿಸಯ್ಯ
ಅಧರ ಮೂರುತಿ ನಿನ್ನ ಪಾದ ಸೇರುವುದಕ್ಕೆ ದಾರಿಯಾವುದಯ್ಯ

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯
ಈ ಪರಿಯಿ೦ದಲಿ ನಿನ್ನ ನೇನೇಸಿ ಕೋ೦ಬೆ ಶ್ರೀ ಪತಿ ಸಲಹೆನ್ನ ಧೂಪನಾರಾಯಣ

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ
********

ದಾರಿ ಯಾವುದಯ್ಯಾ!ವೈಕುಂಠಕ್ಕೆ ಹಾದಿ ತೋರಿಸಯ್ಯಾ!!

ಆ ದಾರಿ ಯಾವುದು ಅಂದರೇ ದೇಹಗಳು ಪ್ರವೇಶಿಸಿ ಅದರಿಂದ ಬಿಡಿಸಿಕೊಂಡು ಅದರಿಂದಾ ಹೊರಗೆ ಬರುವುದೇ ದಾರಿ.
😀
ಅದು ಸತ್ಕರ್ಮದಿಂದಾ ಮತ್ತು ಫಲವನ್ನು ಶ್ರೀಶಗೆ ಅರ್ಪಿಸುವುದೇ ದೇಹಿಯಾದ ಜೀವರ ಮುಖ್ಯ ಉದ್ದೇಶ್ಯವು. ಕರ್ಮ ಬಿಡಿಸಿಕೊಂಬುವ ಯತ್ನವಿರಬೇಕು. ಆದರೇ ಅದರಲ್ಲಿ ರತಿ ಇರಬಾರದು. ಹಾಗಾದರೆ ಯಾವಕರ್ಮವಾದರೇನು,ಯಾವ ಜನ್ಮ ಆದರೇನು, ಯಾವ ಸ್ಥಿತಿ ಆದರೇನು, ಸಂಸಾರದಲ್ಲಿ ಸುಖ ಬಯಸಿ ಇರಬಾರದು.
ಇದಕ್ಕೆ ಮೂರು ವಿಷಯಗಳು ಗಮನದಲ್ಲಿ ಇಟ್ಟು ಕೊಳ್ಳಬೇಕು.
😀
1. ಅತ್ಯಲ್ಪ ದೇಹಾಭರಣ,
2.ಕರ್ಮಫಲಾರ್ಪಣೆಯಲ್ಲಿ ರತಿ,
3.ಇದಕ್ಕೆ ಬೇಕಾದ ಜ್ಞಾನ ಸಂಪಾದನೆ.

ಇದು ಸಜ್ಜನರ ಸೇವಾ, ಶ್ರವಣ,ಮನನ,ಧ್ಯಾನಗಳು ಮಾಡುವುದು ನಿತ್ಯ ಜೀವನದಲ್ಲಿ ನಡೆಯಬೇಕು.
 ಕರ್ಮ ಫಲಗಳನ್ನು ಸ್ವೀಕರಿಸಬೇಕೆಂದು ಪರಮ ಭಕ್ತಿ ಯಿಂದಾ ಭಗವಂತನನ್ನು ಪ್ರಾರ್ಥಿಸುತ್ತಾ ಇರಬೇಕು.

ಪರಮ ಭಾಗವದ್ ಭಕ್ತರು ಇದನ್ನು ಆದರಿಂದ ಕೇಳಬೇಕು

ಶ್ರೀಶ ಉದ್ಧರಿಸೋ...

ಆದಿ ಇಂದಲಿವಿಡಿದು ಇದ್ದ ದೇಹ ಛೇದಿಪುದಕೆ ಇದೇ ಬೀಜಕಾಣೋ
.... ವಿಜಯಪ್ರಭುಗಳ ವಾಕ್ಯ
🙏ಜೈ ವಿಜಯರಾಯ🙏
*********